ಅವರಿಂದು ಸಂಡೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ. ತಮ್ಮಬುಡಕ್ಕೆ ಬರುವುದನ್ನು ತಪ್ಪಿಸಿಕೊಳ್ಳಲು ಹಗರಣಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ರಾಜ್ತದ ಮುಖ್ಯ ಮಂತ್ರಿಗಳು ಅಸಮರ್ಥರಿದ್ದಾಗ ಈ ರೀತಿ ಹಗರಣಗಳನ್ನು ಅಧಿಕಾರಿಗಳು ಮಾಡುತ್ತಾರೆ. ಸಚಿವರ ಮೌಖಿಕ ಆದೇಶದಿಂದ ಈ ಹಗರಣ ನಡೆದಿದೆಂದರು.
ಚುನಾವಣೆಗೆ ಪರಿಶಿಷ್ಟರ ಅಭಿವೃದ್ಧಿ ಹಣವನ್ನು ಕೊಳ್ಳೆ ಹೊಡೆದು ಚುನಾವಣೆಗೆ ಬಳಸಿಕೊಂಡಿದ್ದಾರೆ. ಆದರೂ ಇದಕ್ಕೂ ನಮಗೆ ಸಂಬಂಧ ಇಲ್ಲ ಎನ್ನುವಂತೆ ಸಿಎಂ ವರ್ತಿಸುತ್ತಿದ್ದಾರೆಂದರು.
ನಾವು ಬಿಜೆಪಿ ಅವಧಿಯಲ್ಲಿನ ಹಗರಣಗಳನ್ನು ತನಿಖೆ ಮಸಡುತ್ತೇವೆ ಎಂದು ಹೇಳುತ್ತಿದ್ದಾರೆ ಮುಖ್ಯ ಮಂತ್ರಿಗಳು. ಅವರನ್ನು ಯಾರುವತಡೆದಿಲ್ಲ ತನಿಕಜೆ ಮಾಡಿ ಎಂದು ಸವಾಲು ಹಾಕಿದರು ವಿಜಯೇಂದ್ರ ಅವರು.
ಕದ್ದ ಮಾಲು ವಾಪಸ್ ಬಂದಿದೆಂದು ಹೇಳುತ್ತಿದ್ದಾರೆ ಇದು ಸರಿಯೇ ಮುಖ್ಯ ಮಂತ್ರಿಗಳೇ. ಬಳಸಿಕೊಂಡ ಹಣವನ್ನು ಪಡೆದ ಜನತೆಗೆ ಹಣ ನೀಡಿ ಮತ್ತೆ ಜಮಾ ಮಾಡಿಸಿ ಹಣ ವಾಪಸ್ಸು ಪಡೆದಿದ್ದೇವೆ ಎಂದು ಲೆಕ್ಕ ಹೇಳುತ್ತಿದ್ದಾರೆ. ಹಾಗಾದರೆ ಭ್ರಷ್ಟಾಚಾರ ನಡೆದಿಲ್ಲವಾ ಎಂದರು.