ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಸರಾಂತ ಜಂಬೋ ಸರ್ಕಸ್ ನಾಳೆಯಿಂದ ಚಾಲನೆಗೊಳ್ಳಲಿದ್ದು, ಬರೋಬ್ಬರಿ 40 ದಿನಗಳ ಕಾಲ ಜನರ ರಂಜಿಸಲಿದೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಈ ಕುರಿತು ಮಾತನಾಡಿದ ಸರ್ಕಸ್ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ್ ಅವರು ಪ್ರತಿ ದಿನ ಮದ್ಯಾಹ್ನ 1ಕ್ಕೆ, ಸಂಜೆ 4 ಕ್ಕೆ ಹಾಗೂ ರಾತ್ರಿ 7 ಕ್ಕೆ ಮೂರು ಪ್ರದರ್ಶನಗಳಿರಲಿವೆ. ಎಂ.ವಿ.ಶಂಕರ್ ಅವರು ಸರ್ಕಸ್ ನ ಮೂಲ ಸಂಸ್ಥಾಪಕರಾಗಿದ್ದು, ಸದ್ಯ ಅವರ ಮಕ್ಕಳಾದ ಅಜಯಶಂಕರ್, ಆಶೋಕ ಶಂಕರ್ ಅವರು ನಡೆಸುತ್ತಿದ್ದಾರೆಂದರು.
26 ಬಗೆಯ ಪ್ರದರ್ಶನವನ್ನು 266 ಕಲಾವಿದರಿಂದ 2.30 ತಾಸು ಮನರಂಜನೆ ನೀಡಲಿದ್ದಾರೆ. 4 ದಶಕಗಳಿಂದ ಯಶಸ್ವಿ ಪ್ರದರ್ಶನ ನೀಡುತ್ತಿರುವ ಜಂಬೋ ಸರ್ಕಸ್ ಈ ಬಾರಿ ಆಫ್ರಿಕಾ ದೇಶದ ಕಲಾವಿದರಿಂದ ವಿಭಿನ್ನ ಮಾದರಿಯ ಕಲಾ ಪ್ರದರ್ಶನ ನಡೆಯಲಿದೆ. 100, 150, 200 ಹಾಗೂ 300 ರೂ.ಗಳನ್ನು ನಿಗಧಿ ಪಡಿಸಲಾಗಿದೆ. bookmyseats.in ನಲ್ಲೂ ಬುಕ್ಕಿಂಗ್ ಗೆ ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ 7991172237/9796730336 ಅನ್ನು ಸಂಪರ್ಕಿಸುವಂತೆ ಕೋರಿದರು. ಕಲಾವಿದ ಪ್ರೇಮಮಂ ಗೋಷ್ಠಿಯಲ್ಲಿದ್ದರು.