ಮೈಸೂರು: ರಸಾಯನಿಕ ಮುಕ್ತ ಸಮಾಜದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ದಾವಣಗೆರೆ ಮೂಲದ ಸಂತೆಬೆನ್ನೂರಿನ ಗಾಯುಸ್ ಗ್ಲಿಟ್ಸ್ ಎಂಬ ಯುಟ್ಯೂಬ್ ಚಾನಲ್ನಿಂದ ನಾಳೆ(ಅ.೨೯)ರಂದು ನಗರದ ನಂಜರಾಜ ಬಹುದ್ದೂರ್ ಛತ್ರದಲ್ಲಿ ರಸಾಯನಿಕ ಮುಕ್ತ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಂಡಿದೆ.
ಈ ಕುರಿತು ಚಾನಲ್ನ ಮುಖ್ಯಸ್ಥೆಯಾದ ಟಿ.ಗಾಯಿತ್ರಿ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳಾ ಸಬಲೀಕರಣ ಉತ್ತೇಜಿಸಲು ಹಾಗೂ ರಾಸಾಯನಿಕ ಮುಕ್ತ ಸಮಾಜದ ಬಗ್ಗೆ ಜಾಗೃತಿ ಮೂಡಿಸುತ್ತಾ ಬರಲಾಗಿದೆ. ಅದರಂತೆಯೇ ಮೈಸೂರಿನಲ್ಲಿಯೂ ಕೈ ಮಗ್ಗ ಬಟ್ಟೆಗಳು, ಸಾವಯವ ಗಾಣದ ಎಣ್ಣೆ ಸೇರಿ ಗೃಹ ಉಪಯೋಗಿ ವಸ್ತುಗಳ ಮಾರಾಟ ಪ್ರದರ್ಶನವನ್ನು ನಾಳೆ ಬೆಳಿಗ್ಗೆ ೧೦ರಿಂದ ಸಂಜೆ ೫ರವರೆಗೆ ಹಮ್ಮಿಕೊಳ್ಳಲಾಗಿದೆ. ಪಿ.ವಿ.ರವಿಕುಮಾರ್, ಪ್ರದೀಪ್, ಮಹೇಶ್ ರಾಜೇ ಅರಸ್ ಇನ್ನಿತರರು ಹಾಜರಿದ್ದರು.