ಬೆಂಗಳೂರು: ಕೊಲ್ಕತ್ತಾದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ನಾಳೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರತಿಭಟನೆಗೆ ಕರೆ ಕೊಟ್ಟಿದೆ. ಐಎಂಎ ಕೊಟ್ಟಿರುವ ಕರೆಗೆ ಸರ್ಕಾರಿ ವೈಧ್ಯಾದಿಕಾರಿಗಳ ಸಂಘ, ಖಾಸಗಿ ಆಸ್ಪತ್ರೆ ಗಳ ಒಕ್ಕೂಟ ಮತ್ತು ಹಲವು ವೈದ್ಯಕೀಯ ಅಸೋಸಿಯೇಷನ್ಗಳು ಬೆಂಬಲ ಕೊಟ್ಟಿದ್ದು, ನಾಳೆ ಕರ್ನಾಟಕದಲ್ಲಿ ಬೆಳಗ್ಗೆ 6 ಗಂಟೆಯಿAದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಆಸ್ಪತ್ರೆ ಓಪಿಡಿ ಬಂದ್ ಆಗಲಿದೆ. ಅಂದರೆ 24 ಗಂಟೆಗಳ ಕಾಲ ಓಪಿಡಿ ಸೇವೆ ಸ್ಥಗಿತವಾಗಲಿದೆ. ಇದರಿಂದ ಮಕ್ಕಳು, ವಯಸ್ಸಾದವರಿಗೂ ಓಪಿಡಿ ಸೇವೆ ಇರುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಿಬೇಕಾಗಿದೆ.
ಕ್ಲಿನಿಕ್ ಸೇವೆಯೂ ಸಿಗುವುದಿಲ್ಲ: ಬೆಂಗಳೂರಿನಲ್ಲಿ ಇರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಪ್ರತಿಭಟನೆ ಕಾವು ಜೋರಾಗಿ ಇರಲಿದೆ. ಸರ್ಕಾರಿ ವೈದ್ಯರು ಕಪುö್ಪಪಟ್ಟಿ ಧರಿಸಿ ಎಮರ್ಜೆನ್ಸಿ ಸೇವೆಯನ್ನ ಮಾತ್ರ ನೀಡಲಿದ್ದಾರೆ. ಇದರ ಜೊತೆ ಖಾಸಗಿ ವೈದ್ಯರು ಐಎಂಎ ಸಂಘದ ಎದುರು ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಹೀಗಾಗಿ ಶನಿವಾರ(ಆಗಸ್ಟ್ 17) ಬೆಳಗ್ಗೆ 6 ಗಂಟೆಯಿAದ ಭಾನುವಾರ ಬೆಳಗ್ಗೆ 6 ರವರೆಗೆ, ಓಪಿಡಿ ಸೇವೆ ಬಂದ್ ಆಗಲಿದೆ. ಈ ಹಿನ್ನೆಲೆಯಲ್ಲಿ ರೋಗಿಗಳು ಆಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗಲ್ಲ, ಎಮರ್ಜೆನ್ಸಿ ಪೇಷೆಂಟ್ ಗೆ ಮಾತ್ರ ಚಿಕಿತ್ಸೆ ನೀಡಲಿದ್ದಾರೆ.
ಮುಷ್ಕರಕ್ಕೆ ಯಾರೆಲ್ಲ ಬೆಂಬಲ..!
IMA ವ್ಯಾಪ್ತಿಯ ವೈದ್ಯರ ಬೆಂಬಲ
ಫನಾ ಬೆಂಬಲ ಖಾಸಗಿ ಆಸ್ಪತ್ರೆಗಳ ಒಕ್ಕೂಟ
ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಷನ್
ಮಕ್ಕಳ ವೈದ್ಯರ ಅಸೋಸಿಯೇಷನ್
ಅರ್ಥೋಪಿಟಿಕ್ ಅಸೋಸಿಯೇಷನ್
ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಷನ್
ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ
ಕೊಲ್ಕತ್ತಾದ ಮೃತ ವೈದ್ಯೆಯ ಸಾವಿಗೆ ನ್ಯಾಯ ಒದಗಿಸಬೇಕು. ಹಿಂಸಾಚಾರದ ವಿರುದ್ಧ ವೈದ್ಯರಿಗೆ ರಕ್ಷಣೆ ಒದಗಿಸಬೇಕು. ಆಸ್ಪತ್ರೆಗಳನ್ನು ಸೇಫ್ ಝೋನ್ ಎಂದು ಘೋಷಿಸಲು Iಒಂ ಆಗ್ರಹಿಸಿದೆ. ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಷನ್ ಈಗಾಗಲೇ ತೀವ್ರ ಹೋರಾಟ ನಡೆಸುತ್ತಿದ್ದು, ನಾಳೆಯೂ ಬಂದ್ ಮುಂದುವರಿಸಲು ತೀರ್ಮಾನಿಸಲಾಗಿದೆ.
ಕೇವಲ ಮಲ್ಟಿಸ್ಪೆಷಾಲಿಟಿ, ನರ್ಸಿಂಗ್ ಹೋಂ, ಆಸ್ಪತ್ರೆಗಳು ಮಾತ್ರ ಬಂದ್ ಆಗುತ್ತಿಲ್ಲ, ಇದರ ಜೊತೆಗೆ ಕ್ಲಿನಿಕ್ ವೈದ್ಯರು ಕೂಡಾ ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದು, ನಾಳೆ ಸಣ್ಣ ಪುಟ್ಟ ಖಾಯಿಲೆ ಎಂದು ಕ್ಲಿನಿಕ್ಗೆ ಹೋಗೋಣ ಅಂದ್ಕೊAಡ್ರೆ ಆ ಸೇವೆ ಕೂಡ ಸಿಗೋದಿಲ್ಲ. ಯಾಕೆಂದ್ರೆ ನಾಳೆ ಕ್ಲಿನಿಕ್ಗಳು ಬಂದ್ ಇರಲಿವೆ. ಇನ್ನೂ ನಾಳಿನ ವೈದ್ಯರ ಪ್ರತಿಭಟನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಪ್ರತಿಭಟನೆ ಉದ್ದೇಶ ಸರಿ ಇದೆ. ಅವರ ಹಕ್ಕನ್ನ ಅವರು ವ್ಯಕ್ತಪಡಿಸಲಿ. ಸಾರ್ವಜನಿಕರಿಗೆ ತೊಂದರೆ ಆಗದೇ ರೀತಿ ಪ್ರತಿಭಟನೆ ಮಾಡಲಿ ಎಂದಿದ್ದಾರೆ.
ಒಟ್ಟಿನಲ್ಲಿ ಶನಿವಾರ ಕೊಲ್ಕತ್ತಾ ವೈದ್ಯೆಯ ಹತ್ಯೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದು, ರಾಜ್ಯ ಮತ್ತು ರಾಜಧಾನಿಯ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದ್ದು ಸಾರ್ವಜನಿಕರು ಎಚ್ಚರವಹಿಸಬೇಕಿದೆ.