ನೀವು ನಿದ್ದೆ ಕಡಿಮೆ ಮಾಡುತ್ತಿದ್ದೀರಾ? ಹಾಗಾದರೆ ಈಗಾಗಲೇ ಶರೀರಿದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಲಾರಭಿಸಿರುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ನಿದ್ದೆ ಕಡಿಮೆಯಾಗಿರುವುದು ಪ್ರಮುಖ ಕಾರಣವಾಗಿದೆ. ನಾವು ಆರೋಗ್ಯವಾಗಿರಬೇಕೆಂದರೆ 8 ಗಂಟೆ ನಿದ್ದೆ ಅತ್ಯಾವಶ್ಯಕ. ಮಕ್ಕಳು ಹಾಗೂ ಹದಿಹರೆಯದ ಮಕ್ಕಳಲ್ಲಿ ಅವರ ಬೆಳವಣಿಗೆಗೆ ಸರಿಯಾದ ಪ್ರಮಾಣದ ನಿದ್ದೆ ತುಂಬಾನೇ ಅವಶ್ಯಕವಾಗಿದೆ. ನಮ್ಮ ದೇಹ ಹಾಗೂ ಮೆದುಳಿನ ಆರೋಗ್ಯಕ್ಕೆ ನಿದ್ದೆ ತುಂಬಾನೇ ಅವಶ್ಯಕವಾಗಿದೆ.
ಮಕ್ಕಳ ಬೆಳವಣಿಗೆಗೆ ನಿದ್ದೆ ತುಂಬಾ ಅವಶ್ಯಕವಾಗಿದೆ. ನಿದ್ದೆ ಸರಿಯಾಗಿರದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುವುದು. ನಿದ್ದೆ ಕಡಿಮೆಯಾದರೆ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು, ಉಸಿರಾಟದ ತೊಂದರೆ ಉಂಟಾಗುವುದು, ರೋಗ ನಿರೋಧಕ ಶಕ್ತಿಯಲ್ಲಿ ವ್ಯತ್ಯಾಸ ಉಂಟಾಗುವುದು. ನಿದ್ದೆ ಕಡಿಮೆಯಾದರೆ ಹೃದಯ ಸಂಬAಧಿ ಉಂಟಾಗುವುದು ರಕ್ತದೊತ್ತಡ ಹಾಗೂ ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗುವುದು.
ಎಚ್ಚರವಾಗಿದ್ದರೆ ಹೃದಯ ಬಡಿತ, ರಕ್ತದೊತ್ತಡ ಅಧಿಕವಾಗುವುದು. ಇದರಿಂದ ಹೃದಯಾಘಾತದ ಅಪಾಯ ಉಂಟಾಗುವುದು.
ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗುವುದು ಸರಿಯಾಗಿ ನಿದ್ದೆ ಮಾಡದಿದ್ದರೆ ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗುವುದು. ಟೆಸ್ಟೋಸ್ಟಿರೋನೆ, ಈಸ್ಟೊçÃಜನ್ ಮತ್ತು ಪ್ರೊಗೆಸ್ಟಿರೋನೆ ಇವುಗಳಲ್ಲಿ ವ್ಯತ್ಯಾಸ ಉಂಟಾಗುವುದು. ಇದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗುವುದು. ನಿದ್ದೆ ಕಡಿಮೆಯಾದರೆ ಮೈ ತೂಕ ಹೆಚ್ಚಾಗುವುದು ಯಾರು ನಿದ್ದೆ ಕಡಿಮೆ ಮಾಡುತ್ತಾರೋ ಅವರ ಮೈ ತೂಕ ಹೆಚ್ಚಾಗಲಿದೆ. ಏಕೆಂದರೆ ಎಚ್ಚರವಾಗಿರುವುದರಿಂದ ಹಸಿವಾಗುವುದು, ಇದರಿಂದ ತಿನ್ನುವುದು ಹೆಚ್ಚಾಗುವುದು, ಹೀಗಾಗಿ ಮೈ ತೂಕ ಹೆಚ್ಚಾಗುವುದು.
* ದೇಹದಲ್ಲಿ ಹಸಿವನ್ನು ನಿಯಂತ್ರಿಸುವ ಲೆಪ್ಟಿನ್, ಗೆರ್ಲಿನ್ ಹಾರ್ಮೋನ್ಗಳು ಅಧಿಕವಾಗುವುದು
* ದೈಹಿಕ ಚಟುವಟಿಕೆ ಕಡಿಮೆಯಾಗುವುದು
* ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿ ಆರೋಗ್ಯದಲ್ಲಿ ತೊಂದರೆ ಉಂಟಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ನಿದ್ದೆ ಸರಿಯಾಗಿ ಮಾಡದಿದ್ದರೆ ಸುಸ್ತು ಹೆಚ್ಚಾಗುವುದು, ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬೇಗನೆ ಕಾಯಿಲೆ ಬೀಳುವಿರಿ. ಮರೆವು ಉಂಟಾಗುವುದು ಯಾರಿಗೆ ನಿದ್ದೆ ಕಡಿಮೆಯಾಗುವುದೋ ಅವರಿಗೆ ಮರೆವಿನ ಸಮಸ್ಯೆ ಉಂಟಾಗುವುದು. ಆದ್ದರಿಂದ 8 ಗಂಟೆ ನಿದ್ದೆ ಅವಶ್ಯಕವಾಗಿದೆ. ಯಾರಿಗೆ ಎಷ್ಟು ನಿದ್ದೆ ಅವಶ್ಯಕ
* ಹದಿಹರೆಯದ ಮಕ್ಕಳಿಗೆ 8-10 ಗಂಟೆ ನಿದ್ದೆ ಅವಶ್ಯಕ
* ಶಾಲೆಗೆ ಹೋಗುವ ಮಕ್ಕಳಿಗೆ 9-12 ಗಂಟೆ ನಿದ್ದೆ ಅವಶ್ಯಕ.
* ಪ್ರೀಸ್ಕೂಲ್ಗೆ ಹೋಗುವ ಮಕ್ಕಳು 10-13 ಗಂಟೆ ನಿದ್ದೆ ಅವಶ್ಯಕ
* 6-12 ವರ್ಷದ ಮಕ್ಕಳಿಗೆ 11ರಿಂದ 14 ಗಂಟೆ ನಿದ್ದೆ ಅವಶ್ಯಕ
* ಚಿಕ್ಕ ಮಕ್ಕಳಿಗೆ 12-16 ಗಂಟೆ ನಿದ್ದೆ ಅವಶ್ಯ
* ನವಜಾತ ಶಿಶುಗಳಿಗೆ 14ರಿಂದ 17 ಗಂಟೆ ನಿದ್ದೆ ಅವಶ್ಯಕ. ಸಾಕಷ್ಟು ನಿದ್ದೆ ಮಾಡುವುದು ಅವಶ್ಯಕ ಏಕೆ?
* ಆಗಾಗ ಕಾಯಿಲೆ ಬೀಳುವುದು ಕಡಿಮೆಯಾಗುವುದು
* ಆರೋಗ್ಯಕರ ಮೈ ತೂಕ ಹೊಂದಬಹುದು
* ಮಧುಮೇಹ, ಹೃದಯ ಸಂಬAಧಿ ಸಮಸ್ಯೆ ಕಡಿಮೆಯಾಗುವುದು
* ಮಾನಸಿಕ ಒತ್ತಡ ಕಡಿಮೆಯಾಗಿ ಮಾನಸಿಕ ಆರೋಗ್ಯ ಹೆಚ್ಚಾಗುವುದು
* ನೆನೆಪಿನ ಶಕ್ತಿ ಚೆನ್ನಾಗಿರಲಿದೆ.
* ನಿರ್ಧಾರಗಳನ್ನು ಗೊಂದಲವಿಲ್ಲದೆ ತೆಗೆದುಕೊಳ್ಳಲು ಸಹಾಯ ಮಾಡುವುದು. ಯಾವಾಗ ನಿದ್ದೆ ಮಾಡುವುದು ಒಳ್ಳೆಯದು? ಸರಿಯಾಗಿ ನಿದ್ದೆ ಬರಬೇಕೆಂದರೆ ರಾತ್ರಿ ಸಮಯದಲ್ಲಿ ಮಲಗಬೇಕು, ಕೆಲವರು ನೈಟ್ ಶಿಫ್ಟ್ ವರ್ಕ್ ಮಾಡುತ್ತಾರೆ ಅಂಥವರು ಬೆಳಗ್ಗೆ ಹೊತ್ತಿನಲ್ಲಿ ನಿದ್ದೆ ಮಾಡುತ್ತಾರೆ, ಆದರೆ ಹಗಲು 8-10 ಗಂಟೆ ನಿದ್ದೆ ಮಾಡಿದರೂ ಸುಖ ನಿದ್ದೆ ಅನಿಸಲ್ಲ, ಆಗಾಗ ಎಚ್ಚರಿಕೆಯಾಗುವುದು. ಆದ್ದರಿಂದ ನೈಟ್ ಶಿಫ್ಟ್÷್ಸ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುವುದು.
ಯಾರಲ್ಲಿ ನಿದ್ದೆ ಕಡಿಮೆಯಾಗುವುದು?
* ಮಾನಸಿಕ ಒತ್ತಡ ಅಧಿಕವಿದ್ದಾಗ
* ನೋವು
* ಕೆಲವೊಂದು ಆರೋಗ್ಯ ಸಮಸ್ಯೆ
* ಕೆಫೇನ್ ಸೇವನೆ (2 ಲೋಟಕ್ಕಿಂತ ಅಧಿಕ ಕಾಫಿ ಕುಡಿಯುವ ಅಭ್ಯಾಸ)
* ನಿದ್ರಾಹೀನತೆ ಸಮಸ್ಯೆ ನಿದ್ರಾಹೀನತೆ ತಡೆಗಟ್ಟುವುದು ಹೇಗೆ?
* ರಾತ್ರಿಯಲ್ಲಿ ನಿದ್ದೆ ಸರಿಯಾಗಿ ಬರುತ್ತಿಲ್ಲ ಎಂದಾದರೆ ವೈದ್ಯರ ಸಲಹೆ ಸೂಚನೆ ಪಡೆಯುವುದು ಒಳ್ಳೆಯದು.
* ಮಾನಸಿಕ ಒತ್ತಡ ಕಡಿಮೆಮಾಡಿಕೊಳ್ಳಿ
* ಧ್ಯಾನ, ಯೋಗ ನಿದ್ದೆಗೆ ಸಹಕಾರಿ
* ನಿದ್ದೆ ಮಾಡಲು ಮಾತ್ರೆ ಸೇವಿಸುವ ಬದಲಿಗೆ ನೀವು ಈ ಮೇಲಿನ ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ಒಳ್ಳೆಯದು.