ನವದೆಹಲಿ: ನೂತನ ಸಂಸತ್ ಭವನ ಕೇವಲ ಕಟ್ಟಡವಲ್ಲ, ಇದು ಭಾರತದ 140 ಕೋಟಿ ಜನರ ಆಕಾಂಕ್ಷೆಯ ಸಂಕೇತವಾಗಿದೆ. ಇದು ಭಾರತದ ಸಂಕಲ್ಪ ಕುರಿತು ಜಗತ್ತಿಗೆ ಸಂದೇಶ ನೀಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿಯವರು, ಪ್ರತಿಯೊಂದು ದೇಶದ ಅಭಿವೃದ್ಧಿ ಪಯಣದಲ್ಲಿ ಕೆಲವು ಕ್ಷಣಗಳು ಅಮರವಾಗುತ್ತವೆ. ಮೇ 28 ಕೂಡ ಭಾರತಕ್ಕೆ ಅಂತಹ ದಿನವಾಗಿದೆ. ಹೊಸ ಸಂಸತ್ ಭವನ ಕೇವಲ ಕಟ್ಟಡವಲ್ಲ, ಇದು ಭಾರತದ 140 ಕೋಟಿ ಜನರ ಆಕಾಂಕ್ಷೆಯ ಸಂಕೇತವಾಗಿದೆ. ಇದು ಭಾರತದ ಸಂಕಲ್ಪ ಕುರಿತು ಜಗತ್ತಿಗೆ ಸಂದೇಶ ನೀಡುತ್ತದೆ. ಈ ನೂತನ ಸಂಸತ್ತು ಸ್ವಾವಲಂಬಿ ಭಾರತದ ಉದಯಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು.
ದೇಶದ ಸ್ವಾತಂತ್ರ÷್ಯಕ್ಕಾಗಿ ಅನೇಕರ ತ್ಯಾಗ, ಬಲಿದಾನವಾಗಿದೆ. ಭಾರತ ದೇಶದ ಪ್ರಗತಿಗಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಭಾರತದ ವಿಕಾಸ ಯಾತ್ರೆಗೆ ಈ ಸಂಸತ್? ಭವನ ಸಾಕ್ಷಿಯಾಗಿದೆ. ಸರ್ವ ಧರ್ಮಗಳ ಪ್ರಾರ್ಥನೆಯಿಂದ ಸಂಸತ್? ಭವನ ನಿರ್ಮಾಣವಾಗಿದೆ. ನೂತನ ಸಂಸತ್? ಭವನ ಪ್ರಜಾಪ್ರಭುತ್ವದ ಮಂದಿರವಾಗಿದೆ. ಭಾರತ ಅಭಿವೃದ್ಧಿ ಹೊಂದಿದAತೆಲ್ಲಾ ವಿಶ್ವ ಪ್ರಗತಿ ಮಾರ್ಗದತ್ತ ಸಾಗುತ್ತದೆ.
ನೂತನ ಸಂಸತ್?ನಲ್ಲಿ ಪವಿತ್ರ ರಾಜದಂಡ ಸೆಂಗೋಲ್? ಸ್ಥಾಪನೆಯಾಗಿದೆ. ಚೋಳ ಸಾಮ್ರಾಜ್ಯದಲ್ಲಿ ಸೆಂಗೋಲ್? ಕರ್ತವ್ಯ ಮತ್ತು ಸೇವೆಯ ಪ್ರತಿಕವಾಗಿದೆ. ತಮೀಳುನಾಡಿನಿಂದ ಬಂದ ಪುರೋಹಿತರ ಮಾರ್ಗದರ್ಶನದಲ್ಲಿ ಸಂಸತ್ನಲ್ಲಿ ಸ್ಥಾಪನೆ ಮಾಡಲಾಗಿದೆ. ಸೆಂಗೋಲ್??ನ ಗತಕಾಲದ ವೈಭವ ಮರುಕಳಿಸಿದೆ. ಇಂದು ಭಾರತದ ಪ್ರತಿಷ್ಠೆ, ಭಾರತೀಯರ ಗೌರವ ಮತ್ತಷ್ಟು ಹೆಚ್ಚಲಿದೆ. ಬ್ರಿಟೀಷರು ನಮ್ಮ ದೇಶಕ್ಕೆ ಸ್ವಾತಂತ್ರ÷್ಯ ನೀಡಿದರು. ಅಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾಗಿ ಸೆಂಗೋಲ್? ನೀಡಿದ್ದರು. ಸೆಂಗೋಲ್ ನಾವು ಮಾಡಬೇಕಾದ ಕರ್ತವ್ಯವನ್ನು ನೆನಪಿಸುತ್ತೆ. ಸೆಂಗೋಲ್? ನಮ್ಮೆಲ್ಲರಿಗೂ ಪ್ರೇರಣೆ ಆಗಲಿದೆ ಎಂದು ತಿಳಿಸಿದರು.
ಆತ್ಮ ನಿರ್ಭರ್ಭಾರತ್ ಯೋಜನೆಗೆ ನೂತನ ಸಂಸತ್ ಭವನ ಸಾಕ್ಷಿಯಾಗಿದೆ. ಭಾರತೀಯರ ಸಂಕಲ್ಪದಿAದ ಸಂಸತ್ ಭವನ ನಿರ್ಮಾಣವಾಗಿದೆ. ಭಾರತ ಲೋಕತಂತ್ರದ ಜನಕ. ನಮ್ಮ ವೇದಗಳು ಪ್ರಜಾಪ್ರಭುತ್ವದ ಬಗ್ಗೆ ಹೇಳುತ್ತವೆ. ಮಹಾಭಾರತದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಹೇಳಲಾಗಿದೆ. ಬಸವೇಶ್ವರರ ಅನುಭವ ಮಂಟಪ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿತು.
ನವ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ಶ್ರಮಿಸುತ್ತಿದ್ದೇವೆ. ಇಡೀ ವಿಶ್ವಕ್ಕೆ ಭಾರತ ದೇಶದ ಶಕ್ತಿ ಏನೆಂಬುದು ಗೊತ್ತಾಗಿದೆ. ಸಂವಿಧಾನ ನಮಗೆ ಪ್ರೇರಣೆಯಾಗಿದೆ. ರಾಜದಂಡವನ್ನು ಸಂಸತ್? ಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ರಾಜದಂಡ ಪ್ರಜಾಪ್ರಭುತ್ಚಕ್ಕೆ ಮಾದರಿಯಾಗಿದೆ. ಈ ಸಂಸತ್? ಭವನ ಕಂಡು ಭಾರತೀಯರಿಗೆ ಹೆಮ್ಮೆಯಾಗಿದೆ. ಇದರಲ್ಲಿ ಸಂವಿಧಾನದ ಸ್ವರ, ಕಲಾ, ಸಂಸ್ಕöÈತಿ ಇದೆ ಎಂದು ಹೇಳಿದರು.
ನಮ್ಮ ದೇಶ ವಿವಿಧತೆಯಿಂದ ಕೂಡಿದೆ. ಈ ಸಂಸತ್?? ಭವನ ವಿವಿಧತೆಯಲ್ಲಿ ಏಕತೆಯ ಪ್ರತೀಕವಾಗಿದೆ. ಸಂಸತ್??ನ ಕಣ ಕಣದಲ್ಲಿ ಏಕ ಭಾರತ ಶ್ರೇಷ್ಠ ಭಾರತದ ದರ್ಶನವಾಗಲಿದೆ. ಸಂಸತ್?ನಲ್ಲಿ ಡಿಜಿಟಲ್? ಗ್ಯಾಲರಿ ಇದೆ. ಸಂಸತ್?ನಲ್ಲಿ ಸಾಕಷ್ಟು ಕಾರ್ಮಿಕರ ಪರಿಶ್ರಮವಿದೆ. 9 ವರ್ಷಗಳಲ್ಲಿ 9 ಹೊಸ ನಿರ್ಮಾಣದ ಕಲ್ಯಾಣವಾಗಿದೆ. 9 ವರ್ಷಗಳಲ್ಲಿ ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಾಣವಾಗಿವೆ. 13 ಕೋಟಿ ಶೌಚಾಲಯ ನಿರ್ಮಾಣವಾಗಿದೆ. ಈ ನೂತನ ಸಂಸತ ಭವನದಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದೇವೆ. ನೀರು ಸಂರಕ್ಷಣೆಗಾಗಿ 50 ಸಾವಿರಕ್ಕಿಂತ ಹೆಚ್ಚು ಅಮೃತ ಸರೋವರ ನಿರ್ಮಾಣ ಮಾಡಿದ್ದೇವೆಯ ಇದು ನನಗೆ ಬಹಳ ಸಂಸತ ತಂದಿದೆ. ದೇಶದ ಅಭಿವೃದ್ಧಿ ದೇಶದ ಜನರ ಅಭಿವೃದ್ದಿಯಾಗಿದೆ.
ಸ್ವಾತಂತ್ರ÷್ಯದ ಪೂರ್ವದಲ್ಲಿ ಒಂದು ಸಮಯದಲ್ಲಿ ಮಹಾತ್ಮಾ ಗಾಂಧಿಯವರ ಸಯೋಗ ಆಂದೋಲನವು ಪ್ರತಿಯೊಬ್ಬ ಭಾರತಿಯನನ್ನೂ ಒಗ್ಗೂಡಿಸಿತ್ತು. ಇದರ ಪ್ರತಿಫಲ ನಮಗೆ 1947ರಲ್ಲಿ ದೊರೆಯಿತು. ಮುಂದಿನ ದಿನಗಳಲ್ಲಿ ಭಾರತ ಹೊಸ ಮಾರ್ಗದಲ್ಲಿ ಸಾಗಲಿದೆ. ಭಾರತದ ವಿಶ್ವಾಸ ಬೇರೆ ದೇಶದ ವಿಶ್ವಾಸಕ್ಕೆ ಉತ್ತೇಜನ ನೀಡಿತು. ಭಾರತದಂತ ವಿವಿಧತೆಯಿಂದ ಕೂಡಿದ ದೇಶ ವಿಶ್ವಾಸದಿಂದ ಮುನ್ನಡೆಯುತ್ತದೆ. ಇದು ಬೇರೆ ದೇಶಗಳಿಗೆ ಪ್ರೇರಣೆಯಾಗಿದೆ. ಭಾರತ ಜಗತ್ತಿನ ಅನೇಕ ದೇಶಗಳಿಗೆ ಪ್ರೇರಣೆಯಾಗಿದೆ.
ಈ ಸಂಸತ್ ಭವನ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವನ್ನು ಜಾಗೃತಗೊಳಿಸುತ್ತದೆ. ಇಲ್ಲಿ ಕುಳಿತ ಪ್ರತಿಯೊಬ್ಬ ಜನನಾಯಕನಲ್ಲೂ ಕರ್ತವ್ಯ ಜಾಗೃತ ಮಾಡುತ್ತದೆ. ನಮಗೆ ದೇಶ ಮೊದಲು. ನಾವು ನಿರಂತರವಾಗಿ ನಮ್ಮನ್ನು ನಾವು ಸುಧಾರಣೆಯಾಗುವಂತೆ ಮಾಡಬೇಕು. ನಾವು ಹೊಸ ಮಾರ್ಗವನ್ನು ಹುಡುಕುತ್ತಿರಬೇಕು. ಲೋಕ ಕಲ್ಯಾಣ ನಮ್ಮ ಜೀವನದ ಮಂತ್ರವಾಗಿರಬೇಕು ಎಂದು ಸಂಸ್ಕöÈತ ಮಂತ್ರಗಳನ್ನು ಹೇಳುವ ಮೂಲಕ ನಾಯಕರಿಗೆ ಕಿವಿ ಮಾತು ಹೇಳಿದರು.
ನೂತನ ಸಂಸತ್ ಭವನದಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯ ಬರುವ ದಿನಗಳಲ್ಲಿ ಬಹಳಷ್ಟು ಮಹತ್ವವಾಗುತ್ತದೆ. ಇಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯ ಭಾರತದ ಉಜ್ವಲ ಭವಿಷ್ಯದ ಆಧಾರವಾಗಲಿದೆ. ಇಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯ ಬಡವರ ಪಾಲಿನ ಆಶಾ ಕಿರಣವಾಗಲಿವೆ. ಈ ಸಂಸತ್? ಬಡವರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ. ಇಲ್ಲಿ ನಿರ್ಮಸಲಿರುವ ಕಾನೂನುಗಳು ಬಡವರ, ಯುವಕರ ಏಳಿಗೆಗೆ ಅನುಕೂಲವಾಗಲಿವೆ. ನಾನು ದೇಶದ ಜನರಿಗೆ ನೂತನ ಸಂಸತ್ ನಿರ್ಮಾಣದ ಶುಭಾಶಯ ತಿಳಿಸುತ್ತೇನೆ ಎಂದು ಮೋದಿಯವರು ತಮ್ಮ ಭಾಷಣವನ್ನು ಪೂರ್ಣಗೊಳಿಸಿದರು.