ಇತ್ತೀಚೆಗೆ ವಿಪರೀತ ಚಳಿಯಿಂದಾಗಿ ಜನರಲ್ಲಿ ಶೀತ, ಕೆಮ್ಮು, ಉಸಿರಾಟದ ತೊಂದರೆ ಸಾಮಾನ್ಯವಾಗಿಯೇ ಕಾಣಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ನಿಮ್ಮ ದೇಹಕ್ಕೆ ಆರಾಮ ನೀಡುವಂತಹ ಶುಂಠಿ ಚಹಾವನ್ನು ನೀವು ಮಾಡಿ ಸವಿಯಿರಿ. ಇದು ಕೇವಲ ನೆಗಡಿಗೆ ಮಾತ್ರವಲ್ಲದೇ ತೂಕ ಇಳಿಸಿಕೊಳ್ಳಲು, ಉತ್ತಮ ಜೀರ್ಣಕ್ರಿಯೆಗೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಹಲವಾರು ಪ್ರಯೋಜನಗಳನ್ನೂ ಒಳಗೊಂಡಿದೆ. ಶುಂಠಿ ಚಹಾ ಮಾಡುವ ಸಿಂಪಲ್ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ನೀರು – 2 ಕಪ್
ತುರಿದ ಶುಂಠಿ – 1 ಇಂಚು
ಏಲಕ್ಕಿ – 2
ದಾಲ್ಚಿನಿ ಚಕ್ಕೆ – 1 ಇಂಚು
ಚಹಾ ಪುಡಿ – 3 ಟೀಸ್ಪೂನ್
ಹಾಲು – ಅರ್ಧ ಕಪ್
ಸಕ್ಕರೆ – 2 ಟೀಸ್ಪೂನ್
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ.
* ಅದಕ್ಕೆ ಶುಂಠಿ, ಏಲಕ್ಕಿ ಹಾಗೂ ದಾಲ್ಚಿನ್ನಿ ಹಾಕಿ ಕುದಿಬರಿಸಿ.
* ಈಗ ಚಹಾ ಪುಡಿಯನ್ನು ಸೇರಿಸಿ, ಮಧ್ಯಮ ಉರಿಯಲ್ಲಿ 5 ನಿಮಿಷ ಕುದಿಸಿ.
* ಬಳಿಕ ಹಾಲು ಮತ್ತು ಸಕ್ಕರೆ ಹಾಕಿ 2 ನಿಮಿಷ ಕುದಿಸಿ.
* ಈಗ ಸ್ಟ್ರೈನರ್ ಬಳಸಿ ಚಹಾವನ್ನು ಸೋಸಿ.
* ಇದೀಗ ಶುಂಠಿ ಚಹಾ ತಯಾರಾಗಿದ್ದು, ನೆಗಡಿಗೆ ಮದ್ದಾಗಿ ಬಿಸಿಬಿಸಿಯಾಗಿ ಸವಿಯಿರಿ.