ಬಹುತೇಕ ಮಕ್ಕಳು, ಯುವಕರು ಮಾತ್ರವಲ್ಲದೆ ಕೆಲವು ವಯಸ್ಕರ ಅಚ್ಚುಮೆಚ್ಚಿನ ಖಾದ್ಯಗಳಲ್ಲಿ ನ್ಯೂಡಲ್ಸ್ ಮೊದಲನೇ ಪಟ್ಟಿಯಲ್ಲಿದೆ. ಅದರಲ್ಲಿರುವ ವಿಭಿನ್ನ ರುಚಿಕರ ಮಸಾಲೆ, ವಿವಿಧ ತರಹೇವಾರಿಯಾಗಿ ತಯಾರಿಸುವ ನ್ಯೂಡಲ್ಸ್ ಅನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರೊಮ್ಮೆ ತಪ್ಪದೇ ಈ ಲೇಖನ ಓದಿ.
ನ್ಯೂಡಲ್ಸ್ ಬಹಳ ರುಚಿಕರ ತಿಂಡಿ ಹಾಗೂ ನಿಮಿಷ ಮಾತ್ರದಲ್ಲೇ ತಯಾರಾಗುತ್ತದೆ. ವಿಶ್ವಾದ್ಯಂತ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನ್ಯೂಡಲ್ಸ್ ಅನ್ನು ಎಲ್ಲಾ ವರ್ಗದವರು ಸುಲಭವಾಗಿ ಖರೀದಿಸಬಹುದು, ಬಹಳ ಕಡಿಮೆ ಬೆಲೆಗೆ ಲಭ್ಯವಿರುವುದು ಸಹ ಅದರ ಪ್ರಖ್ಯಾತಿಗೆ ಕಾರಣವಾಗಿದೆ. ಆದರೆ ತರಾತುರಿಯಲ್ಲಿ ತಯಾರಾಗುವ ರುಚಿಕರ ನ್ಯೂಡಲ್ಸ್ ಆರೋಗ್ಯಕ್ಕೆ ಎಷ್ಟು ದುಷ್ಪರಿಣಾಮ ಬೀರುತ್ತದೆ ಗೊತ್ತೆ. ನಾವೇಕೆ ಇಂದೇ ನ್ಯೂಡಲ್ಸ್ ತಿನ್ನುವುದನ್ನು ಬಿಡಬೇಕು ಇಲ್ಲಿದೆ ಕೆಲವು ವೈಜ್ಞಾನಿಕ ಕಾರಣಗಳು.
ಅಪಾಯ ಹೆಚ್ಚಿಸುವ ಎಂಎಸ್ಜಿ
ಶೇಕಡಾ 99ರಷ್ಟು ಇನ್ಸ್ ಟಂಟ್ ನ್ಯೂಡಲ್ಸ್ ಗಳು ಮೋನೋಸೋಡಿಯಂ ಗ್ಲುಟಮೇಟ್ (ಎಂಎಸ್ಜಿ) ಅನ್ನು ಹೊಂದಿದೆ. ಇದು ಆಹಾರದ ಪರಿಮಳ ಹಾಗೂ ರುಚಿಯನ್ನು ಹೆಚ್ಚಿಸಲು ಬಳಸುವ ಸಂಯೋಜನಕವಾಗಿದೆ. ಸಂಶೋಧನೆಯ ಪ್ರಕಾರ ಮಾನವನ ದೇಹಕ್ಕೆ ಹೆಚ್ಚು ಎಂಎಸ್ಜಿ ಸೇರಿದರೆ ತೂಕ ಹೆಚ್ಚಾಗುವುದು, ರಕ್ತದೊತ್ತಡ ಹೆಚ್ಚಾಗುವುದು, ಮೆದುಳಿನ ಮೇಲೆ ಸಹ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ತಲೆನೋವು ಸೇರಿದಂತೆ ಹಲವು ಹಾನಿಕಾರಕ ಪರಿಣಾಮಗಳು ಉಂಟಾಗುತ್ತದೆ.
ಚಟವಾಗುವ ಅಪಾಯ ಹೆಚ್ಚು
ಒಂದು ಬಾರಿ ನ್ಯೂಡಲ್ಸ್ ತಿನ್ನಲು ಆರಂಭಿಸಿದರೆ ತಿನ್ನುತ್ತಲೇ ಇರಬೇಕು ಎಂದು ಭಾಸವಾಗುತ್ತದೆ. ಇದಕ್ಕೆ ಕಾರಣ ಇದರಲ್ಲಿರುವ ರುಚಿಕರ ಮಸಾಲೆಯ ಮಿಶ್ರಣ. ಇದು ಹೀಗೆ ಮುಂದುವರೆದು ಮುಂದೆ ಚಟವಾಗಿ ಮಾರ್ಪಡುತ್ತದೆ. ದಿನದಲ್ಲಿ ಕನಿಷ್ಠ ಎರಡು-ಮೂರು ಬಾರಿಯಾದರೂ ತಿನ್ನಬೇಕು ಎನ್ನುವಂತೆ ನಾಲಿಗೆ ಕೇಳುತ್ತದೆ, ಮತ್ತೆ ಇದರಿಂದ ದೇಹಕ್ಕೆ ಎಂಎಸ್ಜಿ ಪ್ರಮಾಣ ಹೆಚ್ಚುತ್ತದೆ. ನ್ಯೂಡಲ್ಸ್ ಅನ್ನು ರಾಸಾಯನಿಕಗಳಿಂದ ಸಂಸ್ಕರಿಸಲ್ಪಟ್ಟಿರುತ್ತದೆ ಮತ್ತು ಇದರ ಸೇವನೆಯಿಂದ ಮೆದುಳಿನ ಸಂತೋಷ ಕೇಂದ್ರಗಳು ಪ್ರಚೋದಿಸಲ್ಪಡುತ್ತದೆ. ಮತ್ತೆ ಇನ್ನೂ ಬೇಕು ಎಂದು ಪ್ರೇರೆಪಿಸುತ್ತದೆ ಇದರಿಂದಾಗಿ ನೀವು ಹೆಚ್ಚು ತಿನ್ನಲು ಬಯಸುತ್ತೀರಿ. ಇದು ನೀವು ಈ ಖಾದ್ಯ ಸೇವಿಸುವುದನ್ನು ವ್ಯಸನವಾಗಿಸಿಕೊಳ್ಳುವ ರೋಗಲಕ್ಷಣಗಳನ್ನು ಸೂಚಿಸುತ್ತದೆ, ಇತರ ಎಂಎಸ್ಜಿ ಸಂಬAಧಿತ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ.
ಪೌಷ್ಠಿಕಾಂಶ ಕಡಿಮೆ
ಬಹಳಷ್ಟು ಜನರು ಒಂದು ಹೊತ್ತಿನ ಪೌಷ್ಟಿಕ ಆಹಾರಕ್ಕೆ ಬದಲಾಗಿ ಒಂದು ಪ್ಯಾಕೆಟ್ ನ್ಯೂಡಲ್ಸ್ ಅನ್ನು ತಿನ್ನುತ್ತಾರೆ. ಇದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೊರಿ, ಸಕ್ಕರೆ, ಪರಿಷ್ಕರಿಸಿದ (ಸ್ಯಾಚುರೇಟೆಡ್) ಕೊಬ್ಬು ಹೆಚ್ಚುತ್ತದೆ ಮತ್ತು ಯಾವುದೇ ರೀತಿಯ ಪ್ರೋಟೀನ್ ಗಳು ಅಥವಾ ಫೈಬರ್ ಅನ್ನು ಸಹ ಒದಗಿಸುವುದಿಲ್ಲ. ಒಂದು ಹೊತ್ತಿನ ಊಟದಲ್ಲಿ ಸಾಮಾನ್ಯವಾಗಿ ಪೋಷಕಾಂಶಗಳು, ವಿಟಮಿನ್ಸ್ ಗಳು ಹೇರಳವಾಗಿರುತ್ತದೆ. ಆದರೆ ನ್ಯೂಡಲ್ಸ್ ಅನ್ನು ಒಂದು ಹೊತ್ತಿನ ಊಟವನ್ನಾಗಿ ಬದಲಾಯಿಸಿಕೊಂಡರೆ ದೇಹದ ಜೀವಕೋಶ ಹಾಗೂ ಅಂಗಾAಗಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶಗಳು ದೇಹಕ್ಕೆ ಸೇರದೆ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ.
ಅಪಾಯಕಾರಿ ಮೈದಾದಿಂದ
ತಯರಾಗುವ ನ್ಯೂಡಲ್ಸ್ ನ್ಯೂಡಲ್ಸ್ ಅನ್ನು ಮೈದಾದಿಂದ ತಯಾರಿಸಲಾಗುತ್ತದೆ, ಇದು ಗೋಧಿ ಹಿಟ್ಟಿನ ಅರೆಯಲ್ಪಟ್ಟ, ಸಂಸ್ಕರಿಸಿದ ಮತ್ತು ಬಿಳುಪಾಗಿಸಿರುವ ಭಾಗವಾಗಿದೆ. ಮೈದಾ ಸಂಸ್ಕರಿಸಲ್ಪಟ್ಟಿರುವುದರಿAದ ಆರೋಗ್ಯಕ್ಕೆ ತುಂಬಾ ಅಪಾಯಕಾರಿ, ನ್ಯೂಡಲ್ಸ್ ಪರಿಮಳದಿಂದ ಕೂಡಿದೆ ಆದರೆ ಸ್ವಲ್ಪವೂ ಪೌಷ್ಠಿಕಾಂಶವಿಲ್ಲ. ಮೈದಾ ಆಗಾಗ್ಗೆ ಸೇವನೆ ಮಾಡುವುದರಿಂದ ನಿಧಾನವಾಗಿ ವಿಷ ಆಗಿ ಬದಲಾಗುತ್ತದೆ.
ಅಧಿಕ ಸೋಡಿಯಂ ಅನಾರೋಗ್ಯದ ರಹದಾರಿ
ಇನ್ಸ್ ಟಂಟ್ ನ್ಯೂಡಲ್ಸ್ ಗಳು ಅತಿಯಾದ ಸೋಡಿಯಂ ಅನ್ನು ಒಳಗೊಂಡಿದೆ. ಅಧಿಕ ಸೋಡಿಯಂ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಉದಾಹರಣೆಗೆ ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯ ವೈಫಲ್ಯ, ಮೂತ್ರಪಿಂಡದ ಕಲ್ಲುಗಳು ಮತ್ತು ಹೊಟ್ಟೆಯ ಕ್ಯಾನ್ಸರ್ ನಂತಹ ಅನೇಕ ಸಮಸ್ಯೆಗಳು ಎದುರಾಗಬಹುದು.
ಇದು ಮಾಲಿನ್ಯಕಾರಕಗಳನ್ನು ಹೊಂದಿರಬಹುದು
ದೇಹಕ್ಕೆ ಸೀಸ, ಪಾದರಸ, ಆರ್ಸೆನಿಕ್ ಮತ್ತು ತಾಮ್ರದಂತಹ ಕೆಲವು ಅಂಶಗಳು ಸೇರುವುದು ಆರೋಗ್ಯಕರ, ಆದರೂ ಇದು ನಿಗದಿತ ಅಥವಾ ಕನಿಷ್ಠ ಪ್ರಮಾಣದಲ್ಲಿ ಎಂದು ವೈಜ್ಞಾನಿಕವಾಗಿ ಹಾಗೂ ಭಾರತೀಯ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳಿದೆ. ಆದರೆ ಇನ್ಸ÷್ಟಂಟ್ ನ್ಯೂಡಲ್ಸ್ ಗಳಲ್ಲಿ ಇವುಗಳ ಪ್ರಮಾಣ ನಿಗದಿಗಿಣತ ಹೆಚ್ಚಾಗಿರವುದು ಹಲವು ಪರೀಕ್ಷೆಗಳಲ್ಲಿ ಕಂಡುಬAದಿದೆ. ಇಂತಹ ಭಾರದ ಲೋಹಗಳು ದೇಹಕ್ಕೆ ಹೆಚ್ಚು ಸೇರಿದರೆ, ಅನಾರೋಗ್ಯಕರ ಮಟ್ಟವನ್ನು ತಲುಪುವುದರಿಂದ ವಿಷವಾಗಿ ಬದಲಾಗುತ್ತದೆ, ಅಲ್ಲದೇ ದೇಹದ ಅಂಗಾAಗಗಳ ಹಾನಿ, ನಡವಳಿಕೆಯಲ್ಲಿ ಬದಲಾವಣೆ ಅಥವಾ ಅರಿವಿನ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು.
ಗರ್ಭಪಾತಕ್ಕೆ ಕಾರಣ
ಗರ್ಭಿಣಿಯರು ಇನ್ಸ÷್ಟಂಟ್ ನ್ಯೂಡಲ್ಸ್ ತಿನ್ನುವ ಗೀಳು ಹೊಂದಿದ್ದರೆ ಈ ಕ್ಷಣದಲ್ಲೇ ನಿಲ್ಲಿಸಿ. ಗರ್ಭಿಣಿಯಾಗಬೇಕು ಎಂದು ಬಯಸುವವರು ಅಥವಾ ಗರ್ಭಿಣಿಯಾಗಿರುವವರು ನೂಡಲ್ಸ್ ತಿನ್ನುವ ಅಭ್ಯಾಸವಿದ್ದರೆ ಖಂಡಿತವಾಗಿಯೂ ಗರ್ಭಪಾತದಂಥ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ನೂಡಲ್ಸ್ ಭ್ರೂಣದ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಚ್ಚರ.