ಮೈಸೂರು: ರೋಟರಿ ಮೈಸೂರು ಉತ್ತರ, ಕದಂಬ ರಂಗವೇದಿಕೆ ಸಹಯೋಗದಲ್ಲಿ ನ.10 ರಂದು ಸಂಜೆ 6 ಗಂಟೆಗೆ ಗಿಚ್ಚಿಗಿಲಿಗಿಲಿ ಕಲಾವಿದರಿಂದ ನಗೆ ಪ್ರಹಸನ ಹಾಗೂ ಶ್ರೀ ನಾಗಲಿಂಗೇಗೌಡ ಪಾಂಡವಪುರ ಅವರಿಂದ. ಕರೋಕೆ ಕಾರ್ಯಕ್ರಮವನ್ನು ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ರೋಟರಿ ಮೈಸೂರು ಉತ್ತರದ ಅಧ್ಯಕ್ಷ ಎಂ.ಕೆ.ಶ್ರೀಧರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮವನ್ನು ಆರ್.ಐ.ಜಿಲ್ಲೆ 3181 ರ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ ಉದ್ಘಾಟಿಸುವರು. ಜಿಲ್ಲಾ ಯೋಜನೆಗಳ ಕಾರ್ಯಾಧ್ಯಕ್ಷ ಸತೀಶ್ ಬೊಳಾರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಂ.ರಾಜು, ಸಂಚಾಲಕ ರಾಜಶೇಖರ ಕದಂಬ, ರೋಟರಿ ವಲಯ-8 ರ ಸಹಾಯಕ ಗವರ್ನರ್ ಎಂ.ಕೆ.ನಂಜಯ್ಯ, ಖಜಾಂಚಿ ಕೆಂಪೇಗೌಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.