ಬೆಂಗಳೂರು:- ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಪ್ರತಿಷ್ಠಗೆಯ ಕಣವಾಗಿರುವ ರಾಜಕೀಯ ಪಕ್ಷಗಳಿಗೆ ಅಬ್ಬರದ ಪ್ರಚಾರವನ್ನ ನಡೆಸುತ್ತಿದೆ, ಇತ್ತ ರಿಯಲ್ ಸ್ಟಾರ್ ಉಪೇಂದ್ರ 110 ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಸೋಮವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಕಿಯ ಬೆಳೆಯಬೇಕು, ಪ್ರಜೆಗಳು ಉದ್ಧಾರ ಆಗ್ಬೇಕು.ನೋಟಗೆ ಮತ ಹಾಕುವ ಮುನ್ನ ಯೋಚನೆ ಮಾಡಿ ಮತ ಹಾಕಿ, ನೋಟ ಮತದ ಬಗ್ಗೆ ತಿಳಿದುಕೊಂಡು ನೋಟಗೆ ವೋಟ್ ಹಾಕಿ ಎಂದು ಹೇಳಿದರು.
ಇನ್ನೂ ರಾಜಕೀಯ ಲೆಕ್ಕಾಚಾರದ ನಡುವೆ ಹೊಸ ತಂತ್ರವನ್ನ ಉಪಯೋಗಿಸಿರುವ ಉಪೇಂದ್ರ ಅವರು, ಪಕ್ಷವು ನಿಮ್ಮದೇ ಅಧಿಕಾರವೂ ನಿಮ್ಮದೇ’ ಎಂಬ ಘೋಷಣೆ ಮೂಲಕ ಹೊಸ ರಾಜಕೀಯ ತಂತ್ರ ಹೆಣೆದಿದ್ದಾರೆ. ಇನ್ನೂ ಪ್ರಜಾಕೀಯ ಚಿಠಿಠಿ ಬಗ್ಗೆಯೂ ಉಪೇಂದ್ರ ಅವರು ಮಾಹಿತಿ ನೀಡಿದ್ದಾರೆ. ಜನರ ಡಿಮ್ಯಾಂಡ್ ನಮಗೆ ಗೊತ್ತಿದೆ. ಪಾರದರ್ಶಕ ರಿಪೋರ್ಟ್ ಕೊಡ್ತೀವಿ. ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ ಎಂದು ವಿವರಿಸಿದರು.