ಬೆಂಗಳೂರು: ವಿಧಾನಸೌಧದ ಮುಂದೆಯೇ ಬೈಕ್ಗೆ ಬೆಂಕಿ ಹಚ್ಚುವ ಮೂಲಕ ಯುವಕನೊಬ್ಬ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇವನ ಆಕ್ರೋಶಕ್ಕೆ ಕಾರಣವಾಗಿರೋದು ಪೆÇಲೀಸರಿಂದ ತಾಯಿಯ ನಿಂದನೆ ಎನ್ನಲಾಗಿದೆ. ಪೆÇಲೀಸರ ಮೇಲಿನ ಕೋಪಕ್ಕೆ ಯುವಕ ಬೈಕ್ಗೆ ಬೆಂಕಿ ಹಚ್ಚಿದ್ದಾನೆ.
ವಿಧಾನಸೌಧದ ಮುಂದೆ ಬೈಕ್ಗೆ ಬೆಂಕಿ ಹಚ್ಚಿದ ಯುವಕನನ್ನು ಚಳ್ಳಕೆರೆ ಮೂಲದ ಪೃಥ್ವಿರಾಜ್ ಎಂದು ಗುರುತಿಸಲಾಗಿದೆ. ಪೃಥ್ವಿ ಟ್ರಕ್ಕಿಂಗ್ಗೆ ಹೋಗಿದ್ದ ವೇಳೆ ನಾಪತ್ತೆಯಾಗಿದ್ದ. ಅದಕ್ಕೆ ಗಾಬರಿಯಾದ ಪೃಥ್ವಿ ಅವರ ತಾಯಿ ಚಳ್ಳಕೆರೆ ಪೆÇಲೀಸರ ಮೊರೆ ಹೋಗಿದ್ದಾರೆ.
ಯುವಕನ ತಾಯಿ ದೂರು ನೀಡಲು ಚಳ್ಳಕೆರೆ ಪೆÇಲೀಸ್ ಠಾಣೆಗೆ ಹೋಗಿದ್ದಾರೆ. ಆಗ ಪೆÇಲೀಸರು ಪೃಥ್ವಿ ತಾಯಿನ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಅಂತ ಯುವಕ ಆರೋಪಿಸಿದ್ದಾನೆ. ಪೆÇಲೀಸರ ಮೇಲಿನ ಆ ಕೋಪಕ್ಕೆ ವಿಧಾನಸೌಧ ಮುಂಭಾಗ ಬೈಕ್ ನಿಲ್ಲಿಸಿ ಬೆಂಕಿ ಇಟ್ಟಿದ್ದಾನೆ.
ಬೈಕ್ಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯುವಕನನ್ನು ವಿಧಾನಸೌಧ ಠಾಣೆಯ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಯುವಕನ ಆರೋಪದ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆ ಕೈಗೊಳ್ಳಲಾಗಿದೆ.