ಮಳವಳ್ಳಿ ಪಟ್ಟಣದ ಪೊಲೀಸರು ಹಾಗೂ ಕೇಂದ್ರ ಅರೆ ಪಡೆ ಸೈನ್ಯ ದವರಿಂದ ಪಟ್ಟಣದಲ್ಲಿ ಪಂಥ ಸಂಚಲನ ನಡೆಸಿದ್ದರು.
ಕೊಳ್ಳೇಗಾಲ ರಸ್ತೆಯಿಂದ ಹೊರಟ ಪಟ್ಟಣದ ಮೈಸೂರ್ ರಸ್ತೆವರೆಗೂ ಪೊಲೀಸರು ಹಾಗೂ ಕೇಂದ್ರ ಅರೆ ಪಡೆ ಸೈನ್ಯದವರು ಪಂಥ ಸಂಚಲನ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು .
ಪಟ್ಟಣ ಪೊಲೀಸ್ ಠಾಣೆಯ ಪಿಐ ರಾಜೇಶ್ ಮಾತನಾಡಿ ಮೇ ತಿಂಗಳು 10 ನೇ ತಾರೀಕಿನಂದು ವಿಧಾನಸಭೆ ಚುನಾವಣೆ ಇರುವುದರಿಂದ ಕೇಂದ್ರ ಅರೆ ಪಡೆ ಸೈನ್ಯವು ಪಟ್ಟಣಕ್ಕೆ ಆಗಮಿಸಿದೆ ಅವರನ್ನು ಸ್ವಾಗತಿಸಿ ಜನರಲ್ಲಿ ಜಾಗೃತಿ ಮೂಡಿಸಲು ಇಂದು ಪಟ್ಟಣದ ಪೊಲೀಸರು ಹಾಗೂ ಕೇಂದ್ರ ಅರೆ ಪಡೆ ಸೈನ್ಯ ದವರಿಂದ ಪಟ್ಟಣದಲ್ಲಿ
ಪಂಥ ಸಂಚಲನ ನಡೆಸುತ್ತಿದ್ದೇವೆ ಎಂದರು ಜನರು ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು .