ಮೈಸೂರು: ವಿದ್ಯಾರ್ಥಿಗಳು ಹಿಂದೆಲ್ಲಾತರಗತಿ ಹಾಗೂ ಗ್ರಂಥಾಲಯಗಳಲ್ಲಿ ಶಿಕ್ಷಣವನ್ನು ಪಡೆಯಬೇಕಿತ್ತುಆದರೆ ಬದಲಾದಕಾಲಘಟ್ಟದಲ್ಲಿ ಮುಂದುವರೆದತAತ್ರಜ್ಞಾನದಿAದಾಗಿಯಾರೂಎಲ್ಲಿಬೇಕಾದರೂಯಾವಾಗ ಬೇಕಾದರೂ ಶಿಕ್ಷಣವನ್ನು ಪಡೆಯಬಹುದಾಗಿದೆಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವೆ ವಿ.ಆರ್.ಶೈಲಜಾಅಭಿಪ್ರಾಯ ಪಟ್ಟರು.
ನಗರದ ವಿದ್ಯಾವರ್ಧಕ ಪ್ರÀಥಮದರ್ಜೆಕಾಲೇಜಿನಲ್ಲಿಇಂದು“ಉನ್ನತ ಶಿಕ್ಷಣದಲ್ಲಿ ತಾಂತ್ರಿಕ ಪರಿವರ್ತನೆ: ದೃಷ್ಟಿಕೋನಗಳು ಮತ್ತು ಸವಾಲುಗಳು” ವಿಷಯದಕುರಿತುಏರ್ಪಡಿಸಿದ್ದ ಒಂದು ದಿನದರಾಷ್ಟç ಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉನ್ನತ ಶಿಕ್ಷಣವು ಇಂದು ಸಾಂಪ್ರದಾಯಿಕ ವಿಧಾನಗಳನ್ನು ಬಿಟ್ಟುತಂತ್ರಜ್ಞಾನಆಧಾರಿತವಾದವಿಧಾನಗಳಿAದ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ.ಪ್ರಸ್ತುತಕಾಲಘಟ್ಟವುಡಿಜಿಟಲ್ಯುಗವಾಗಿದ್ದು ಸಾಮಾಜಿಕ ಮಾಧ್ಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಯಾರೂ ಕಲಿಸಿಕೊಡದೆ ಪರಿಣಿತರಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿಯೂಸಹ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ.ಇಂದುದೂರ ಶಿಕ್ಷಣದ ಬದಲುಆನ್ಲೈನ್ ಶಿಕ್ಷಣವು ಹೆಚ್ಚೆಚ್ಚು ಜನಪ್ರಿಯವಾಗುತ್ತಿದ್ದು, ಭಾರತದಒಟ್ಟುಜನಸಂಖ್ಯೆಯಲ್ಲಿ ಶೇ.40ಕ್ಕಿಂತ ಹೆಚ್ಚಿನವರುಯುವಜನರಾಗಿದ್ದುತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.ಪ್ರಸ್ತುತ ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳು ತಂತ್ರಜ್ಞಾನದ ಬಳಕೆಯಲ್ಲಿ ಬಹಳ ಹಿಂದಿವೆ. ಕಂಪ್ಯೂಟರ್ ಸಾಕ್ಷರತೆಯೂಎಲ್ಲೆಡೆಯೂ ಸರ್ವವ್ಯಾಪಕವಾಗಿದ್ದುಅನಕ್ಷರಸ್ಥರಾದಿಯಾಗಿಎಲ್ಲರೂಅದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಶಿಕ್ಷಕರು ಜೀವನ ಪೂರ್ತಿಅಧ್ಯಯನ ಶೀಲರಾಗಬೇಕಿದ್ದು, ವಿದ್ಯಾರ್ಥಿಗಳುಪ್ರತಿಭೆಯೊಂದಿಗೆ ನಿರಂತರಪರಿಶ್ರಮ ಪಟ್ಟರೆ ಮಾತ್ರಯಶಸ್ಸನ್ನು ಗಳಿಸಬಹುದೆಂದು ತಿಳಿಸಿದರು.
ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾನಿಲಯದಇನ್ಫರ್ಮೇಷನ್ ಸಿಸ್ಟಮ್ಸ್ ವಿಭಾಗದ ಪ್ರಾಧ್ಯಾಪಕರಾದಡಾ.ಸಜನ್ ಮ್ಯಾಥ್ಯೂತಮ್ಮ ದಿಕ್ಸೂಚಿ ಭಾಷಣದಲ್ಲಿಕೋವಿಡ್ ಸಾಂಕ್ರಾಮಿಕ ಭೀತಿಯ ನಂತರಜಗತ್ತಿನಲ್ಲಿ ಹಲವಾರು ಬದಲಾವÀಣೆಗಳಾಗಿದ್ದು ಶಿಕ್ಷಣ ಕ್ಷೇತ್ರವುತಂತ್ರಜ್ಞಾನದಿAದಾಗಿ ಬದಲಾವಣೆಗೊಳಪಟ್ಟಿದೆ ಎಂದಅವರುಚಾಟ್ಜಿಪಿಟಿಯಿAದಾಗಿ 30ನೇ ನವಂಬರ್ ಪ್ರಮುಖವಾದ ದಿನವಾಗಿದ್ದು,ಇದು ಸಾಂಪ್ರದಾಯಿಕ ಶಿಕ್ಷಣವನ್ನು ಬದಲಾಯಿಸುವ ದಿಸೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿ ಶಿಕ್ಷಕರು ಬೇರೇಉದ್ಯೋಗವನ್ನು ಹುಡುಕಬೇಕಾಗಬಹುದು.ಶಿಕ್ಷಕರು ಸಾಂಪ್ರದಾಯಿಕ ಶಿಕ್ಷಣಕ್ಕೆ ಬದಲಾಗಿ ವಿದ್ಯಾರ್ಥಿಗಳ ಆಶಯದಂತೆರೂಪಾAತರ ಮಾಡಿಶಿಕ್ಷಣವನ್ನು ನೀಡÀಬೇಕಾಗುತ್ತದೆ.ತಂತ್ರಜ್ಞಾನದಕಾರಣದಿAದಾಗಿ ಮ್ಯಾನೇಜ್ಮೆಂಟ್ಸೇರಿದAತೆಹಲವಾರುಕ್ಷೇತ್ರಗಳಲ್ಲಿ ವಿಫುಲವಾದ ಉದ್ಯೋಗಾವಕಾಶಗಳಿದ್ದು ಅವುಗಳ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ವಿದ್ಯಾರ್ಥಿನಿ ಶೋಭ ಪ್ರಾರ್ಥಿಸಿದ ಕಾರ್ಯಕ್ರಮದಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ಗೌ||ಅಧ್ಯಕ್ಷರಾದಗುಂಡಪ್ಪಗೌಡ ವಹಿಸಿ, ಗೌ|| ಕಾರ್ಯದರ್ಶಿ ಪಿ.ವಿಶ್ವನಾಥ್.ಗೌ|| ಕೋಶಾಧ್ಯಕ್ಷ ಶ್ರೀಶೈಲರಾಮಣ್ಣವರ್ ಅತಿಥಿಗಳಾಗಿ ಭಾಗವಹಿಸಿದ್ದರು.ಪ್ರಾಂಶುಪಾಲ ಡಾ.ಎಸ್.ಮರೀಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದಕಾರ್ಯಕ್ರಮದಲ್ಲಿರಾಜ್ಯದ ವಿವಿಧ ಕಾಲೇಜುಗಳ ಪ್ರತಿನಿಧಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರೊ.ಡಿ.ಪಲ್ಲವಿ ಸ್ವಾಗತಿಸಿ, ಪ್ರೊ.ವಿದ್ಯಾ.ಆರ್ ನಿರೂಪಿಸಿ ಪ್ರೊ.ಸೌಮ್ಯ.ಎಂ ವಂದಿಸಿದರು.