ಬಿಹಾರ:- ಮದುವೆಯಾಗಿ ನಂಬಿಸಿ ಮೋಸ ಮಾಡಿದ ಬಾಯ್ ಫ್ರೆಂಡನ್ನು ವೈದ್ಯೆ ನರ್ಸಿಂಗ್ ಹೋಮ್ ಗೆ ಕರೆಸಿಕೊಂಡಿದ್ದಾಳೆ. ಬಳಿಕ ಅನಸ್ತೇಷಿಯಾ ಕೊಟ್ಟು ಖಾಸಗಿ ಅಂಗವನ್ನು ಕತ್ತರಿಸಿದ ಘಟನೆ ನಡೆದಿದೆ.
ಬಿಹಾರದ ಸರಣ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ವೈದ್ಯೆ ಮತ್ತು 30 ವರ್ಷದ ಬಾಯ್ ಫ್ರೆಂಡ್ ಕಳೆದೆರೆಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರಂತೆ ಜುಲೈ 1 ರಂದು ಚಪ್ರಾ ಜಿಲ್ಲೆಯ ಕೋರ್ಟ್ ನಲ್ಲಿ ರಿಜಿಸ್ಟರ್ ಮದುವೆ ಆಗಬೇಕಾಗಿತ್ತು. ಆದರೆ ಮದುವೆಯ ದಿನ ಬಾಯ್ ಫ್ರೆಂಡ್ ಬಂದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ವೈದ್ಯೆ ಆತನ ಖಾಸಗಿ ಅಂಗ ಕತ್ತರಿಸಿದ್ದಾಳೆ. ಸರಣ್ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ಖಾಸಗಿ ಅಂಗ ಕತ್ತರಿಸಿ ವಿಕೃತಿ ಮೆರೆದಿದ್ದಾಳೆ.
ಪ್ರಿಯತಮೆಯಿಂದ ಬಾಯ್ ಫ್ರೆಂಡ್ ನ ಖಾಸಗಿ ಅಂಗಗಕ್ಕೆ ಕತ್ತರಿ
