ಇತ್ತೀಚಿಗೆ ಕುಡಿಯುವ ನೀರು ಬಹುದೊಡ್ಡ ವ್ಯಾಪಾರ ವಲಯವಾಗಿದೆ. ನೂರಾರು ಕಂಪನಿಗಳು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಪೂರೈಸುತ್ತಿವೆ. ಆದ್ರೆ ನಿಮಗೆ ಗೊತ್ತಿಲ್ಲದೆ ಈ ಪ್ಲಾಸ್ಟಿಕ್ ಬಾಟಲಿ ನೀರಿನಿಂದ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದೆ. ಇವುಗಳಿಂದ ನ್ಯಾನೋಪ್ಲಾಸ್ಟಿಕ್ಗಳು ನಿಮ್ಮ ಹೊಟ್ಟೆ ಸೇರುತ್ತಿವೆ. ಇವು ಗಂಭೀರ ಆರೋಗ್ಯಕ್ಕೆ ಕಾರಣವಾಗಲಿದೆ ಎಂಬುದು ಅಧ್ಯಯನದಿಂದ ಬಹಿರಂಗಗೊAಡಿದೆ.
ಹೊಸ ಅಧ್ಯಯನದ ಪ್ರಕಾರ, ಒಂದು ಸಾಮಾನ್ಯವಾದ ಒಂದು ಲೀಟರ್ (33-ಔನ್ಸ್) ಬಾಟಲಿಯ ನೀರು ಸರಾಸರಿ 240,000 ಪ್ಲಾಸ್ಟಿಕ್ ತುಣುಕುಗಳನ್ನು ಹೊಂದಿರುತ್ತದೆ. ಇವು ಮಾನವ ದೇಹಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಬಾಟಲಿ ನೀರು ಹಿಂದೆ ಅಂದಾಜಿಸುವುದಕ್ಕಿAತ 100 ಪಟ್ಟು ಹೆಚ್ಚು ಪ್ಲಾಸ್ಟಿಕ್ ಕಣಗಳನ್ನು ಹೊಂದಿರಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ. ಹಿಂದಿನ ಅಧ್ಯಯನಗಳು ಮೈಕ್ರೋಪ್ಲಾಸ್ಟಿಕ್ಗಳು ಅಥವಾ 1 ರಿಂದ 5,000 ಮೈಕ್ರೊಮೀಟರ್ಗಳ ನಡುವಿನ ತುಣುಕುಗಳಿಗೆ ಮಾತ್ರ ಕಾರಣವಾಗಿವೆ ಎಂದು ತಿಳಿಸಿದ್ದವು.
ನ್ಯಾನೊಪ್ಲಾಸ್ಟಿಕ್ಗಳು ಮೈಕ್ರೊಪ್ಲಾಸ್ಟಿಕ್ಗಳಿಗಿಂತ ಮಾನವನ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತವೆ, ಏಕೆಂದರೆ ಅವು ಮಾನವ ಜೀವಕೋಶಗಳ ಮೇಲೆ ದಾಳಿ ಮಾಡುತ್ತವೆ, ರಕ್ತಪ್ರವಾಹಕ್ಕೆ ಪ್ರವೇಶಿಸಲು ಮತ್ತು ಅಂಗಗಳ ಮೇಲೆ ಪರಿಣಾಮ ಬೀರುವಷ್ಟು ಚಿಕ್ಕದಾಗಿರುತ್ತವೆ. ನ್ಯಾನೊಪ್ಲಾಸ್ಟಿಕ್ಗಳು ಉದರದಲ್ಲಿರುವ ಶಿಶುಗಳ ದೇಹಕ್ಕೂ ಸೇರಿಕೊಳ್ಳಬಹುದು. ಆದರೆ ಇದನ್ನು ಗುರುತಿಸಲು ಬೇಕಾದ ತಂತ್ರಜ್ನಾನದ ಕೊರತೆ ಇದೆ.
ಆರೋಗ್ಯದ ಮೇಲೆ ನೇರ ಪರಿಣಾಮ: ತಂಪು ಪಾನೀಯ ಅಥವಾ ಖನಿಜಯುಕ್ತ ನೀರನ್ನು ಶೇಖರಿಸಲು ತಯಾರಿಸುವ ಬಾಟಲಿಗಳನ್ನು ಪಾಲಿಥೈಲಿನ್ ಟೆರೆಫ್ತಾಲೇಟ್(ಪಿಇಟಿ)ನಿಂದ ತಯಾರಿಸಲಾಗುತ್ತದೆ. ಈ ಬಾಟಲಿಗಳ ಮೇಲೆ ಸೂರ್ಯನ ಕಿರಣ ಬಿದ್ದಾಗ ಅಥವಾ ಪ್ರಯಾಣಿಸುವಾಗ ಕಾರ್ನಲ್ಲಿ ಇವುಗಳನ್ನು ಇಟ್ಟುಕೊಂಡು ಬಿಸಿಲಿನಲ್ಲಿ ಪ್ರಯಾಣ ಮಾಡಿದರೆ ರಾಸಾಯನಿಕಗಳು ಬಾಟಲಿಯಿಂದ ಹೊರಬರುತ್ತವೆ. ಜೊತೆಗೆ ನೀರನ್ನು ಕಲುಷಿತಗೊಳಿಸುತ್ತವೆ.
ಈ ಬಾಟಲಿಗಳನ್ನು ಕೇವಲ ಒಮ್ಮೆ ಮಾತ್ರ ಬಳಕೆಗೆ ಯೋಗ್ಯವಾಗಿರುತ್ತವೆ. ಅವುಗಳಲ್ಲಿ ಪದೇ ಪದೇ ನೀರು ಅಥವಾ ನಮಗೆ ಬೇಕಾದ ಪದಾರ್ಥಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವುದು. ಇದರಿಂದಾಗಿ ಕ್ಯಾನ್ಸರ್, ಮಧುಮೇಹ, ಬೊಜ್ಜು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇವೆ ಎಂದು ಅಧ್ಯಯನಗಳು ದೃಢ ಪಡಿಸಿವೆ.
ತಜ್ಞರ ಹೇಳುವ ಪ್ರಕಾರ ಪ್ಲಾಸ್ಟಿಕ್ ಬಾಟಲಿಗಳಲ್ಲಿರುವ ರಾಸಾಯನಿಕ ಪದಾರ್ಥಗಳಿಂದ ಅಂಡೋತ್ಪತ್ತಿ ಸಮಸ್ಯೆ, ಪಿಸಿಓಎಸ್, ಎಂಡೊಮೆಟ್ರಿಯೋಸ್ ಮತ್ತು ಸ್ತನ ಕ್ಯಾನ್ಸರ್ಗಳಂತಹ ಗಂಭೀರ ಸಮಸ್ಯೆಗಳು ಹುಟ್ಟುತ್ತವೆ. ಕೆಲವು ಪ್ಲಾಸ್ಟಿಕ್ ಬಾಟಲಿಗಳ ಬಣ್ಣ ಬೇರೆ ಬೇರೆ ಇರುತ್ತವೆ. ಇಂತಹ ಬಾಟಲಿಗಳಲ್ಲಿ ರಾಸಾಯನಿಕ ವಸ್ತುಗಳ ಬಳಕೆ ಹೆಚ್ಚಿಸುತ್ತದೆ. ಇವು ಸಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತವೆ.
ಟ್ರೆಡ್ಮಿಲ್ ಎನ್ನುವ ಸಂಶೋಧನೆ ಮತ್ತು ಪ್ರಯೋಗಾಲಯದ ಪರೀಕ್ಷೆಯ ಪ್ರಕಾರ ಅವಧಿ ಮುಗಿದ ಪ್ಲಾಸ್ಟಿಕ್ ಬಾಟಲಿಗಳ ಉಪಯೋಗ ಮಾಡುವುದರಿಂದ ಅಪಾಯಕಾರಿ ಸೂಕ್ಷ÷್ಮಜೀವಿಗಳ ಉದಯವಾಗುತ್ತದೆ. ಇವು ಆರೋಗ್ಯವನ್ನು ಹಾಳುಮಾಡುತ್ತವೆ. ಸ್ಟೇನ್ಲೆಸ್ ಸ್ಟೀಲ್ ಅಥವಾ ಅಲ್ಯೂಮಿನಿಯಂ ಬಾಟಲಿಗಳ ಬಳಕೆ ಮಾಡಿದರೆ ಹೆಚ್ಚು ಸುರಕ್ಷಿತ ಎನ್ನಲಾಗುತ್ತದೆ. ಆದರೆ ಇವು ಸಹ ಒಂದು ನಿಗಧಿತ ಅವಧಿಯ ನಂತರ ಉಪಯೋಗಕ್ಕೆ ಯೋಗ್ಯವಲ್ಲ. ಗಾಜಿನ ಬಾಟಲಿಗಳು ಕುಡಿಯುವ ನೀರನ್ನು ಶೇಖರಿಸಲು ಸುರಕ್ಷಿತವಾದದ್ದು. ಆದರೆ ಇವುಗಳ ಕಾಳಜಿ ಹೆಚ್ಚಿರಬೇಕು. ಆರೋಗ್ಯದ ಮೇಲೆ ಯಾವುದೇ ಕೆಟ್ಟಪರಿಣಾಮ ಬೀರದು.
ವಿಶ್ವದಾದ್ಯಂತ ಪ್ರತಿ ವರ್ಷ 450 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ಗಳನ್ನು ಉತ್ಪಾದನೆಯಾಗುತ್ತದೆ, ಅದರಲ್ಲಿ ಹೆಚ್ಚಿನವು ಅಂತಿಮವಾಗಿ ಭೂಮಿಯೊಳಗೆ ಸೇರಿಕೊಳ್ಳುತ್ತವೆ. ಬಹುಪಾಲು ಪ್ಲಾಸ್ಟಿಕ್ ನೈಸರ್ಗಿಕವಾಗಿ ಕರಗುವುದಿಲ್ಲ, ಆದರೆ ಕಾಲಾನಂತರದಲ್ಲಿ ಸಣ್ಣ ತುಂಡುಗಳಾಗಿ ಭುಮಿಯಲ್ಲಿ ಸೇರುತ್ತವೆ.