ಮೈಸೂರು: ಟೀಂ ಮೈಸೂರು ಪ್ರತಿಷ್ಠಾನ ಇಂದು ಸರಸ್ವತಿಪುರಂ ರಮ್ಯಾ ಹೋಟೆಲ್ ನ ಎಡ ಭಾಗದಲ್ಲಿ ಫುಟ್ ಪಾಥ್ ಇಂಟರ್ ಲಾಕಿಂಗ್ ಕಾಮಗಾರಿಯನ್ನು ಆವೈಜ್ಞಾನಿಕವಾಗಿ ಮಾಡಿರುವುದನ್ನು ಖಂಡಿಸಲಾಯಿತು.
ಮೈಸೂರಿನ ಅಂದವನ್ನು ಹೆಚ್ಚಿಸಲು ಸ್ಥಳೀಯ ನಗರಪಾಲಿಕೆ ಹಾಗೂ ಸರ್ಕಾರಗಳು ಮೈಸೂರಿನ ಎಲ್ಲ ಪಾದಚಾರಿ ರಸ್ತೆಗಳಿಗೆ ಇಂಟರ ಲಾಕ್ ವ್ಯವಸ್ಥೆ ಮಾಡುತ್ತಿರುವುದು ಪ್ರಶಂಸಿಸುವ ಸಂಗತಿ.
ಅಧಿಕಾರಿ ವರ್ಗ, ಆಡಳಿತ ಸದಸ್ಯರು, ಹಾಗೂ ಗುತ್ತಿಗೆಗಾರರು ಅಭಿವೃದ್ಧಿ ಜೊತೆಗೆ ಪರಿಸರ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿದರೆ ಮೈಸೂರು ಇನ್ನಷ್ಟು ಹಸಿರಾಗಿ ಕಂಗೊಳಿಸುತ್ತದೆ, ಇಲ್ಲಿ ನಾವು ಗಮನಿಸಬೇಕಿರುವ ವಿಚಾವವೇನೆಂದರೆ ಈ ಇಂಟರ್ ಲಾಕಿಂಗ್ ಮಾಡುವ ಸಂದರ್ಭದಲ್ಲಿ, ನಾಲ್ಕು ದಿಕ್ಕುಗಳಿಂದನು ನೀರು ನಿಲ್ಲದೆ ಅಥವಾ ಭೂಮಿ ಆ ನೀರನ್ನು ಇರಿಕೊಳ್ಳುವ ಸಾಧ್ಯತೆಯೇ ಇಲ್ಲ ಕಾರಣ ಇಂಟರ್ ಲಾಕಿಂಗ್ ಮಾಡುವ ಸಂದರ್ಭದಲ್ಲಿ, ಮೊದಲು ಪಾದಚಾರಿ ರಸ್ತೆಯನ್ನು ಎತ್ತರ ಮಾಡುವುದು, ನಂತರ ಗ್ರೋಟ್ ಮಿಕ್ಸ್ ಹಾಕುವುದು,ತದ ನಂತರ ಅದರ ಮೇಲೆ ಎಂ ಸ್ಯಾಂಡ್ ಹಾಕುವುದು, ಅದಾದ ನಂತರ ಇಂಟರ್ ಲಾಕಿಂಗ್ ಹಾಕುವುದು ಹೇಗೆ ಮಾಡಿದರೆ ಮಳೆ ನೀರು ಭೂಮಿಗೆ ಸೇರುವುದಿಲ್ಲ, ಗಿಡಗಳಿಗೂ ನೀರು ಹೋಗುವುದಿಲ್ಲ
ಗುತ್ತಿಗೆದಾರರು ಕೆಲಸ ಮಾಡುವ ಸಂದರ್ಭದಲ್ಲಿ ಮೇಲೆ ತಿಳಿಸಿದಹಾಗೆ ಅವರು ಅವರ ಕೆಲಸ ಮುಗಿಸಿ ಹೋಗುತ್ತಾರೆ ಆದರೆ ಅವರು ಕೆಲಸ ಮುಗಿಸುವ ವೇಳೆಗೆ ಅವರಿಗೆ ತಿಳಿಯದೆ ಒಂದಷ್ಟು ಗಿಡಗಳು ಅದರ ಜೀವ ಕಳೆದುಕೊಳ್ಳುತ್ತೇ ಕಾರಣ ಅವರು ಆ ಭಾಗದಲ್ಲಿ ನೆಟ್ಟಿರುವ ಗಿಡಗಳಿಗೆ ಸರಿಯಾದ ಪಾತಿ ಮಾಡದೆ ಗಿಡದ ಬುಡದ ವರೆಗೆ ಮುಚ್ಚಿ ಬಿಡುತ್ತಾರೆ (ಇಂಟರ್ ಲಾಕಿಂಗ್ ಹಾಗೂ ಎಂ ಸ್ಯಾಂಡ್) ನಿಂದ ಹೀಗಾಗಿ ಗಿಡಗಳಿಗೆ ಬೇಕಿರುವ ಗೊಬ್ಬರ, ನೀರು ಇತರೆ ಪೌಷ್ಟಿಕ ಕೊರತೆ ಇಂದ ಸತ್ತು ಹೋಗುತ್ತೆ.
ಇಂದು ಮೈಸೂರಿನ ಅಗ್ನಿಶಾಮಕ ಠಾಣೆಯ ರಮ್ಯಾ ಹೋಟೆಲ್ ಬಳಿ ಪಾದಚಾರಿ ರಸ್ತೆಯಲ್ಲಿ ಇಂಟರ್ ಲಾಕಿಂಗ್ ವ್ಯವಸ್ಥೆ ಮಾಡಲಾಗುತ್ತಿದು ನಮ್ಮ ಟೀಂ ಮೈಸೂರು ತಂಡದ ಸದಸ್ಯರು ಭೇಟಿ ನೀಡಿ ಮೈಸೂರು ಮಹಾಪೌರರಾದ ಶಿವಕುಮಾರ್ ಅವರನ್ನು ಸಂಪರ್ಕಿಸಿ, ಅವರಿಗೆ ಈ ವಿಚಾರವನ್ನು ಮುಟ್ಟಿಸಿದಾಗ ಅವರು ಈ ಸಂಬAಧಪಟ್ಟ ಗುತ್ತಿಗೆದಾರರಿಗೆ ಮಾಹಿತಿ ನೀಡಿ, ಸ್ಥಳಕ್ಕೆ ಗುತ್ತಿಗೆದಾರರ ಪರವಾಗಿ ಪೇವೆರ್ ಕೆಲಸದ ಮಂಜು ಗಿಡಗಳಿಗೆ ಸರಿಯಾದ ಪಾತಿ ವ್ಯವಸ್ಥೆ ಮಾಡುತ್ತೇನೆಂದು ತಿಳಿಸಿ, ಈಗಾಗಲೇ ಗಿಡದ ಬುಡದ ವರಗೆ ಹಾಕಿರುವ ಇಂಟರ್ ಲಾಕಕಿನ ಗಿಡದ ಸುತ್ತ 2 ಅಡಿಗಳನು ತೆಗೆಯುವಂತೆ ಸೂಚಿಸಲಾಗಿದೆ ಹಾಗೂ ಈ ವಿಚಾರವನ್ನು ಸಂಬAದ ಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ.
ಈ ರೀತಿ ಗಿಡಗಳ ಸುತ್ತ ಪೇವೆರ್ಸ್ ಹಾಕುವ ಸಂದರ್ಭದಲ್ಲಿ ಗಿಡಗಳಿಗೆ ಪಾತಿ ಬಿಟ್ಟು ಮಾಡಬೇಕು ಎಂದು ಆಗ್ರಹಿಸಲಾಯಿತು, ಈ ರೀತಿ ಗಿಡಗಳ ಸುತ್ತ ಪಾವರ್ಸ್ಗಳನ್ನು ಅಳವಡಿಸಿದರೆ ಸ್ವತಃ ಟೀಂ ಮೈಸೂರು ತಂಡದ ಸದಸ್ಯರು ಗಿಡಗಳಿಗೆ ಫಾತೀಮಾಡುತ್ತೇವೆ ಎಂದು ಅಧಿಕಾರಿ ವರ್ಗದವರಿಗೆ ತಿಳಿಸಿರುತ್ತಾರೆ
ಈ ಸಂದರ್ಭದಲ್ಲಿ ತಂಡದ ಸಂಚಾಲಕರಾದ ಗೋಕುಲ್ ಗೋವರ್ಧನ, ಸಹ ಸಂಚಾಲಕರಾದ ಯಶವಾಂತ್, ತಂಡದ ಸದಸ್ಯರಾದ ವಿಶ್ವನಾಥ್, ಅನಿಲ್ ಜೈನ್, ಹರೀಶ್ ಬಾಬು, ಹರೀಶ್ ಶೆಟ್ಟಿ, ಅಭಿಷೇಕ, ಹಾಗೂ ಇತರರು ಭಾಗವಹಿಸಿದ್ದರು.