ನವದೆಹಲಿ: ನಾಳೆ ಜುಲೈ 23ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಹುನಿರೀಕ್ಷಿತ 2024ನೇ ಬಜೆಟ್ ಮಂಡನೆ ಮಾಡಲಿದೆ. ಬಜೆಟ್ ಮಂಡನೆ ಬಳಿಕ ದೇಶದಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತಾ ಎಂಬ ನಿರೀಕ್ಷೆಯಲ್ಲಿ ಆಭರಣ ಪ್ರಿಯರು ಇದ್ದರು. ಆದರೆ ಬಜೆಟ್ ಮಂಡನೆಗೂ ಮುನ್ನವೇ ದೇಶಾದ್ಯಂತ ಚಿನ್ನ ಹಾಗೂ ಬೆಳ್ಳಿ ದರ ಇಳಿಕೆ ಕಂಡಿದೆ.
ಬಂಗಾರ ಹಾಗೂ ಬೆಳ್ಳಿ ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತವೆ. ದಿನದಿಂದ ದಿನಕ್ಕೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆ ಆಗುತ್ತದೆ ವಿನಃ ಇಳಿಕೆಯಾಗುವುದು ಬಹಳ ವಿರಳ. ಆದರೆ ಇದೀಗ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಳಿಕೆ ಕಂಡಿದೆ.
ನಿನ್ನೆ ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 67,800 ಇದ್ದರೆ, 10 ಗ್ರಾಂ (24 ಕ್ಯಾರೆಟ್) ದರ 73,970 ಇತ್ತು. ಇಂದು 22 ಕ್ಯಾರೆಟ್ ಬಂಗಾರ 67,700 ಇಳಿಕೆ ಕಂಡಿದೆ. ಸದ್ಯ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಹೊಂದಲಾಗಿದೆ.
ರಾಜ್ಯದಲ್ಲಿ 22 ಕ್ಯಾರೇಟ್ (10 ಗ್ರಾಂ) ಬಂಗಾರ ದರ ಎಷ್ಟಿದೆ:
ಬೆಂಗಳೂರು – 67,700 ರೂಪಾಯಿ
ಚೆನ್ನೈ – 68,250 ರೂಪಾಯಿ
ಮುಂಬೈ – 67,700 ರೂಪಾಯಿ
ಕೋಲ್ಕತ್ತಾ – 67,700 ರೂಪಾಯಿ
ನವದೆಹಲಿ – 67,850 ರೂಪಾಯಿ
ಹೈದರಾಬಾದ್ – 67,700 ರೂಪಾಯಿ