ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಬಂಟೇನಹಳ್ಳಿ ಪಂಚಾಯಿತಿಗೆ ಸೇರುವ ಮುದು ಗೆರೆ ಗ್ರಾಮ ದಲ್ಲಿನ ದಿವಂಗತ ಹುಲೀಗೌಡರ ಪತ್ನಿ ಪಾರ್ವತಮ್ಮ ಅವರ ಹೆಸರಿನಲ್ಲಿದ್ದ 32 ಗುಂಟೆ ಜಮೀನನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಇವರ ಮೈದುನನ ಮಗ ಮರಣ ದೃಢೀಕರಣ ಪತ್ರ ಸೃಷ್ಟಿಸಿದ್ದಾನೆ. ಪಾರ್ವತಮ್ಮ ಅವರಿಗೆ 5 ಜನ ಗಂಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಆಸ್ತಿ ವಿಭಾಗ ಮಾಡಿಕೊಟ್ಟಿದ್ದರು. ತಮ್ಮ ಜೀವನಾಂಶಕ್ಕೆಂದು 32 ಗುಂಟೆ ಜಮೀನನ್ನು ಇಟ್ಟು ಕೊಂಡಿದ್ದರು. ಬೇಕರಿ ಮಾಡಿಕೊಂಡು ಬೇರೆ ಊರಿನಲ್ಲಿ ಮಕ್ಕಳ ಜೊತೆ ವಾಸ ಮಾಡುತ್ತಿದ್ದರು. ಮೈದುನನ ಮಗನು ಪಾರ್ವತಮ್ಮ ರವರ ಮರಣ ದೃಢೀಕರಣ ಪತ್ರ ಪಡೆದಿರುವ ವಿಷಯ ತಿಳಿದು, ತಹಸೀಲ್ದಾ ಕಚೇರಿಯಲ್ಲಿ ಪರಿಶೀಲಿಸಿದಾಗ ತಹಸೀಲ್ದಾರ್ ಎನ್.ವಿ.ನಟೇಶ್ ಎಂಬುವರು.
ತಹಸೀಲ್ದಾರ್ ಆಗಿದ್ದ ಅವಧಿಯಲ್ಲಿ ಪಾರ್ವತಮ್ಮ ಮೃತಪಟ್ಟಿದ್ದಾರೆಂದು ಮರಣ ದೃಢೀಕರಣ ಪತ್ರವನ್ನು ಪಡೆದಿರುವುದು ಬೆಳಕಿಗೆ ಬಂದಿದೆ.
ಇದರಿಂದ ಆತಂಕಗೊಂಡ ಪಾರ್ವತಮ್ಮನ ಮಗ ಮಲ್ಲೇಶ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
………..ಸುಚಿತ್ರ ಗೌಡ