ಮಂಡ್ಯ: ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ಕಿರುಕುಳ ನೀಡಿದ ಯುವಕನಿಗೆ ಯುವತಿಯೋರ್ವಳು ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಡ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಂಡ್ಯದಿAದ ಪಾಂಡವಪುರಕ್ಕೆ ತೆರಳುವ ಬಸ್ನಲ್ಲಿ ಯುವತಿ ಒಬ್ಬಳೆ ಕುಳಿತಿದ್ದಳು. ಇದನ್ನು ಗಮನಿಸಿದ ಯುವಕ ಹಿಂದಿನ ಸೀಟಿನಿಂದ ಕೀಟಲೆ ಕೊಡಲು ಶುರು ಮಾಡಿದ್ದನು. ಇದರಿಂದ ಕೋಪಗೊಂಡ ಯುವತಿ ಕುಚೇಷ್ಟೆ ಮಾಡುತ್ತಿದ್ದ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ.
ಯುವಕನ ಟೀ ಶರ್ಟ್ ಹಿಡಿದು ಹಿಗ್ಗಾ ಮುಗ್ಗ ಕೆನ್ನೆಗೆ ಬಾರಿಸಿದ್ದಾಳೆ. ಇನ್ನು ಯುವತಿ ಯುವಕನಿಗೆ ಥಳಿಸಿರುವ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವತಿ ಕೈಯಲ್ಲಿ ಏಟು ತಿಂದ ಯುವಕ ಬಸ್ನಿಂದ ಇಳಿದು ಪರಾರಿಯಾಗಿದ್ದಾನೆ.