ಮೈಸೂರು: ನಗರದ ದೇವ ಪಾರ್ಥಿವ ರಸ್ತೆಯಲ್ಲಿರುವ ಮೈಸೂರು ನಗರ ಬಿಜೆಪಿ ಕಚೇರಿಯಲ್ಲಿ ಶಾಸಕ ಹಾಗೂ ನಗರಾಧ್ಯಕ್ಷ ಟಿ.ಎಸ್ ಶ್ರೀವತ್ಸರ ನೇತೃತ್ವದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತ ರಾಜೇಂದ್ರ ಅವರು ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ, ಗಿರಿಧರ್, ಮಾಧ್ಯಮ ಸಹ ಸಂಚಾಲಕ ಪ್ರದೀಪ್ ಕುಮಾರ್, ಮಾಧ್ಯಮ ಸಹ ವಕ್ತಾರ ಕೇಬಲ್ ಮಹೇಶ್, ಚೇತನ್, ಕಿಶೋರ್, ನಾಗರಾಜ್, ಬಾಲಕೃಷ್ಣ ಶಿವರಾಜ್ ಇನ್ನಿತರರು ಉಪಸ್ಥಿತರಿದ್ದರು.