ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಹೈಕಮಾಂಡ್ ಇಂದು ಪ್ರಕಟಿಸಿದೆ.
ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಒಬಿಸಿ –32, ಎಸ್ಸಿ –30, ಎಸ್ಟಿ– 16 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ಅರುಣ್ ಸಿಂಗ್ ತಿಳಿಸಿದರು.
ಬೆಳಗಾವಿ ಉತ್ತರ – ರವಿ ಪಾಟೀಲ, ಬೆಳಗಾವಿ ದಕ್ಷಿಣ – ಅಭಯ್, ಬೆಳಗಾವಿ ಗ್ರಾಮಾಂತರ – ನಾಗೇಶ್, ಬೆಳಗಾವಿ ಗ್ರಾಮೀಣ – ನಾಗೇಶ್ ಮಾರ್ವಾಡಕರ್, ಬೈಲಹೊಂಗಲ – ಜಗದೀಶ್ ಮೆಟಗೊಡ್, ವಿಜಯನಗರ – ಸಿದ್ದಾರ್ಥ್ ಸಿಂಗ್, ಬಳ್ಳಾರಿ ಗ್ರಾಮಾಂತರ – ಬಿ.ಶ್ರೀರಾಮುಲು, ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ, ಹೊನ್ನಾಳಿ – ಎಂ.ಪಿ.ರೇಣುಕಾಚಾರ್ಯ, ಉಡುಪಿ – ಯಶ್ಪಾಲ್ ಸುವರ್ಣ, ಕಾರ್ಕಳ – ವಿ.ಸುನೀಲ್ ಕುಮಾರ್, ಚಿಕ್ಕಮಗಳೂರು – ಸಿ.ಟಿ.ರವಿ, ಚಿಕ್ಕನಾಯಕಹಳ್ಳಿ – ಜೆ.ಸಿ.ಮಾಧುಸ್ವಾಮಿ, ತಿಪಟೂರು – ಬಿ.ಸಿ.ನಾಗೇಶ್, ತುಮಕೂರು – ಜ್ಯೋತಿ ಗಣೇಶ್, ಕೊರಟಗೆರೆ – ಅನಿಲ್ ಕುಮಾರ್ (ನಿವೃತ್ತ ಐಎಎಸ್ ಅಧಿಕಾರಿ) ಕಣಕ್ಕಿಳಿಯಲಿದ್ದಾರೆ.
ಆರ್. ಅಶೋಕ ಅವರು ಪದ್ಮನಾಭನಗರ ಮತ್ತು ಕನಕಪುರ ಎರಡು ಕಡೆ ಸ್ಪರ್ಧೆ ಮಾಡಲಿದ್ದಾರೆ.
ಅಫಜಲಪುರ-ಮಾಲೀಕಯ್ಯ ಗುತ್ತೇದಾರ್, ಕಲಬುರಗಿ.ಗ್ರಾ – ಬಸವರಾಜ್, ಕಲಬುರಗಿ.ದ – ದತ್ತಾತೇಯ ಪಾಟೀಲ್, ಕಲಬುರಗಿ.ಉ – ಚಂದ್ರಕಾಂತ ಪಾಟೀಲ್, ಅಳಂದ-ಸುಭಾಷ್ ಗುತ್ತೇದಾರ್, ಔರಾದ್ – ಪ್ರಭು ಚೌಹಾಣ್, ರಾಯಚೂರು.ಗ್ರಾ – ತಿಪ್ಪರಾಜು ಹವಲ್ದಾರ್, ರಾಯಚೂರು-ಶಿವರಾಜ ಪಾಟೀಲ್, ಸಿಂಧನೂರು – ಕೆ.ಕರಿಯಪ್ಪ, ಮಸ್ಕಿ – ಪ್ರತಾಪಗೌಡ ಪಾಟೀಲ್, ಕನಕಗಿರಿ – ಬಸವರಾಜ ದಡೇಸುಗೂರು, ನರಗುಂದ – ಶಂಕರ ಪಾಟೀಲ್, ಧಾರವಾಡ – ಅಮೃತ ದೇಸಾಯಿ, ಹಳಿಯಾಳ – ಸುನೀಲ್ ಹೆಗಡೆ, ಕಾರವಾರ -ರೂಪಾಲಿ ನಾಯ್ಕ್, ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕಿಳಿಯಲಿದ್ದಾರೆ.
ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್, ಕೋಲಾರ – ವರ್ತೂರು ಪ್ರಕಾಶ್, ಯಲಹಂಕ – ಎಸ್.ಆರ್.ವಿಶ್ವನಾಥ್, ಕೆ.ಆರ್.ಪುರಂ – ಭೈರತಿ ಬಸವರಾಜು, ಯಶವಂತಪುರ – ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿನಗರ – ಮುನಿರತ್ನ, ಮಹಾಲಕ್ಷ್ಮೀ ಲೇಔಟ್ – ಕೆ.ಗೋಪಾಲಯ್ಯ, ಮಲ್ಲೇಶ್ವರಂ – ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಗಾಂಧಿನಗರ – ಸಪ್ತಗಿರಿಗೌಡ, ಚಾಮರಾಜಪೇಟೆ – ಭಾಸ್ಕರ ರಾವ್(ನಿವೃತ್ತ ಐಪಿಎಸ್ ಅಧಿಕಾರಿ), ಬಸವಗುಡಿ – ರವಿ ಸುಬ್ರಹ್ಮಣ್ಯ, ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ್, ಹೊಸಕೋಟೆ – ಎಂಟಿಬಿ ನಾಗರಾಜ್, ರಾಜಾಜಿನಗರ – ಎಸ್.ಸುರೇಶ್ ಕುಮಾರ್, ಚನ್ನಪಟ್ಟಣ – ಸಿ.ಪಿ.ಯೋಗೇಶ್ವರ್, ಕೆ.ಆರ್.ಪೇಟೆ – ಕೆ.ಸಿ.ನಾರಾಯಣಗೌಡ, ಹಾಸನ – ಪ್ರೀತಂ ಗೌಡ, ಚಾಮರಾಜನಗರ – ವಿ. ಸೋಮಣ್ಣ, ವರುಣ – ವಿ. ಸೋಮಣ್ಣ, ಬೆಳ್ತಂಗಡಿ – ಹರೀಶ್ ಪೂಂಜಾ, ಬಂಟ್ವಾಳ – ರಾಜೇಶ್ ನಾಯಕ್, ಪುತ್ತೂರು – ಆಶಾ ತಿಮ್ಮಪ್ಪ, ಮಡಿಕೇರಿ – ಅಪ್ಪಚ್ಚು ರಂಜನ್, ವಿರಾಜಪೇಟೆ – ಕೆ.ಜಿ.ಬೋಪಯ್ಯ, ನಂಜನಗೂಡು ಕ್ಷೇತ್ರದಿಂದ ಡಾ. ಹರ್ಷವರ್ಧನ್ ಕಣಕ್ಕಿಳಿಯಲಿದ್ದಾರೆ.
ಚಾಮುಂಡೇಶ್ವರಿ- ಕವೀಶ್ ಗೌಡ
ಚಾಮರಾಜ – ನಾಗೇಂದ್ರ
ವರುಣಾ – ಸೋಮಣ್ಣ
ಟಿ. ನರಸೀಪುರ – ಡಾ. ರೇವಣ್ಣ
ಪಿರಿಯಾಪಟ್ಟಣ – ಸಿ. ಹೆಚ್. ವಿಜಯಶಂಕರ್
ಕೆಆರ್ ನಗರ – ವೆಂಕಟೇಶ್ ಹೊಸಹಳ್ಳಿ
ನರಸಿಂಹರಾಜ – ಸಂದೇಶ್ ಸ್ವಾಮಿ
ನಂಜನಗೂಡು – ಹರ್ಷವರ್ಧನ್
ಹುಣಸೂರು – ದೇವರಹಳ್ಳಿ ಸೋಮಶೇಖರ್