ಹಾಲು ಎಲ್ಲರಿಗೂ ಅಷ್ಟಾಗಿ ಇಷ್ಟವಾಗುತ್ತದೆಯೆಂದೇನಿಲ್ಲ. ಹಾಲಿನ ಕುರಿತು ಯೋಚಿಸಿದರೇ ಸಾಕು, ಬಾಲ್ಯದ ದಿನಗಳು ಕಣ್ಣಮುಂದೆ ಹಾದುಹೋಗುತ್ತವೆ. ಆ ದಿನಗಳಲ್ಲಿ ನಮ್ಮ ಅಮ್ಮಂದಿರು ಪ್ರತೀ ದಿನ ಬೆಳಗ್ಗೆ ಹೊಡೆದುಬಡಿದಾದರೂ ಒಂದು ಲೋಟದಷ್ಟು ಹಾಲನ್ನು ಕುಡಿಸದೇ ಬಿಡುತ್ತಿರಲಿಲ್ಲ. ಏಕೆಂದರೆ, ಸರ್ವೇಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಪ್ರಕಾರ, ಹಾಲು ಒಂದು “ಆರೋಗ್ಯದಾಯಕ” ಆಹಾರವಸ್ತು.
ಆದಾಗ್ಯೂ, ಇಸವಿ 2016 ರಲ್ಲಿ ಪೇಟಾ (ಪೀಪಲ್ ಫ಼ಾರ್ ದ ಎಥಿಕಲ್ ಟ್ರೀಟ್ಮೆಂಟ್ ಆಫ಼್ ಅನಿಮಲ್ಸ್) ಸಂಸ್ಥೆಯು ಜಾಹಿರಾತೊಂದರಲ್ಲಿ ಕೊಟ್ಟಿರುವ ಹೇಳಿಕೆಯ ಪ್ರಕಾರ, ಹಾಲಿಗಿಂತಲೂ ಬಿಯರ್ ಹೆಚ್ಚು ಆರೋಗ್ಯದಾಯಕವಾಗಿದೆ. ತಮ್ಮ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪೇಟಾ ಸಂಸ್ಥೆಯು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಅಧ್ಯಯನಗಳನ್ನು ಬಳಸಿಕೊಂಡಿತು.
ಹಾಲಿಗಿAತ ಬೀರ್ ಹೇಗೆ ಉತ್ತಮ?
“ತೀರ್ಪು ಈಗಾಗಲೇ ಹೊರಬಿದ್ದಿದೆ ಹಾಗೂ ಹಾಲಿನ ವಿರುದ್ಧ ಬಿಯರ್ ಮೇಲುಗೈ ಸಾಧಿಸಿದೆ. ಹಿತಮಿತ ಪ್ರಮಾಣದಲ್ಲಿ ಸೇವಿಸುವ ಆಲ್ಕೋಹಾಲ್ ನಿಮ್ಮ ಆರೋಗ್ಯಕ್ಕೆ ಹಿತಕರ, ಆದರೆ ಹೈನುಗಾರಿಕಾ ಉತ್ಪನ್ನಗಳು ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆಯಾದ್ದರಿಂದ ಹಾಗೂ ಬಿಲಿಯಗಟ್ಟಲೇ ಹಸುಗಳು ನರಳುವಂತೆ ಮಾಡುವುದರಿಂದ ಹೈನುಗಾರಿಕಾ ಉತ್ಪನ್ನಗಳನ್ನು ನಾವು ಜವಾಬ್ದಾರಿಯುತವಾಗಿ ಸೇವಿಸುತ್ತೇವೆ ಎಂಬ ಮಾತಿನಲ್ಲಿ ಅರ್ಥವಿಲ್ಲ” ಎಂದು ಹೇಳುತ್ತಾರೆ ಪೇಟಾದ ಕಾರ್ಯಕಾರೀ ಉಪಾಧ್ಯಕ್ಷೆಯಾಗಿರುವ ಟ್ರೇಸೀ ರೀಮನ್ ಅವರು.
ಬಿಯರ್ನ ಪ್ರಯೋಜನಗಳು
“ಹೃದ್ರೋಗಗಳು, ಬೊಜ್ಜು, ಮಧುಮೇಹ, ಹಾಗೂ ಕ್ಯಾನ್ಸರ್ ನಂತಹ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳೊಂದಿಗೆ ಇದು ನಂಟು ಹೊಂದಿದೆ” ಎಂದು ಹೈನುಗಾರಿಕಾ ಉತ್ಪನ್ನಗಳ ಮತ್ತಷ್ಟು ಅಡ್ಡಪರಿಣಾಮಗಳನ್ನು ಪರಿಗಣನೆಯಲ್ಲಿರಿಸಿಕೊಂಡು ಪೇಟಾ ಸಂಸ್ಥೆಯು ಹೇಳಿದೆ. ಹೈನುಗಾರಿಕಾ ಉತ್ಪನ್ನಗಳು ಮೊಡವೆ, ಕಫ಼, ಹಾಗೂ ವಾತದಂತಹ ಲ್ಯಾಕ್ಟೋಸ್ ಅಸಹಿಷ್ಣುತೆಯ ರೋಗಲಕ್ಷಣಗಳಿಗೂ ಕಾರಣವಾಗುತ್ತವೆ.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ವರದಿಯು ಅಷ್ಟಕ್ಕೇ ಮುಕ್ತಾಯವಾಗಲಿಲ್ಲ, ಜೊತೆಗೆ ಪೇಟಾ ಬರೆದುಕೊಂಡಿರುವುದೇನೆAದರೆ, “ಹೈನುಗಾರಿಕಾ ಉತ್ಪನ್ನಗಳು ಆಸ್ಟಿಯೋಫೊರೋಸಿಸ್ ಅನ್ನು (ಮೂಳೆಗಳು ದುರ್ಬಲಗೊಳ್ಳುವ ಹಾಗೂ ಟೊಳ್ಳಾಗುವ ಒಂದು ರೋಗ) ತಡೆಗಟ್ಟುವುದಕ್ಕೆ ಬದಲಾಗಿ ಅದನ್ನು ಉಂಟಾಗುವAತೆ ಮಾಡುತ್ತವೆ”. ಆದಾಗ್ಯೂ, ಮೂಳೆಗಳು ಟೊಳ್ಳಗಾಗುವುದನ್ನು ಬಿಯರ್ ತಡೆಯುತ್ತದೆ ಹಾಗೂ ಜೊತೆಗೆ ಇನ್ನಿತರ ಆರೋಗ್ಯ-ಸಂಬAಧೀ ಪ್ರಯೋಜನಗಳನ್ನೂ ಹೊಂದಿದೆ. ಬಿಯರ್ ನ ಕುರಿತಾದ ಈ ಸಂಗತಿಯಂತೂ ಅನೇಕರ ಪಾಲಿನ ವಾರಾಂತ್ಯದ ಯೋಜನೆಗಳ ಮೇಲೆ ಪರಿಣಾಮ ಬೀರುವುದಂತೂ ಖರೆ!