ಕೇರಳ: ಬೋಟ್ ಪಲ್ಟಿಯಾಗಿ 18 ಜನರು ಸಾವನ್ನಪ್ಪಿದ ಘಟನೆ ಮಲಪ್ಪುರಂ ಜಿಲ್ಲೆಯ ತಿರೂರು ತಾಲೂಕಿನ ತಾನೂರ್ ಬಳಿ ನಡೆದಿದ್ದು, ಘಟನೆಯ ಕುರಿತು ಸಚಿವ ವಿ ಅಬ್ದುರಾಹಿಮಾನ್ ದೃಢಪಡಿಸಿದ್ದಾರೆ.
ದೋಣಿಯಲ್ಲಿದ್ದ ಪ್ರಯಾಣಿಕರು ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿ ಮತ್ತು ತನೂರ್ ಪ್ರದೇಶಗಳಿಗೆ ಸೇರಿದವರು ಎಂದು ಗುರತಿಸಲಾಗಿದೆ.
ಸುಮಾರು 30ರಿಂದ 40ಕ್ಕೂ ಹೆಚ್ಚು ಪ್ರವಾಸಿಗರಿದ್ದ ಬೋಟ್ ಪಲ್ಟಿಯಾಗಿ ದುರಂತ ಸಂಭವಿಸಿದೆ. ದುರಂತದಲ್ಲಿ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇನ್ನು ಅಗ್ನಿಶಾಮಕ ದಳ, ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ. ತೂವಲ್ ತೀರ್ಥಂ ಪ್ರವಾಸಿ ತಾಣದ ಪುರಪುಜಾ ನದಿಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಟೈಮ್ಸ್ ನೌ ವರದಿ ಪ್ರಕಾರ ಈವರೆಗೆ ಸುಮಾರು 10 ಜನರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೋಟ್ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಜೀವ ರಕ್ಷಕ ಸಾಧನಗಳು ಇರಲಿಲ್ಲ. ದೋಣಿ ದಡದಿಂದ 300 ಮೀಟರ್ ದೂರದಲ್ಲಿತ್ತು ಎಂದು ವರದಿಯಿಂದ ತಿಳಿದುಬಂದಿದೆ.
ಬೋಟ್ ಪಲ್ಟಿ: ಮಕ್ಕಳು, ಮಹಿಳೆಯರು ಸೇರಿದಂತೆ 18 ಜನರ ಸಾವು
