ಮೈಸೂರು ಜಿಲ್ಲೆ ಇಲವಾಲ ಹೋಬಳಿಯ ಉಯಿಲಾಳು ಗ್ರಾಮದ ಖಾಸಗಿ ಫಾರ್ಮಸಿನಲ್ಲಿ ನಿನ್ನೆ ಸಂಜೆ ಮೂರು ದಿನಗಳ ಹಿಂದೆ ಅರಣ್ಯ ಇಲಾಖೆಯಿಂದ ಇರಿಸಿದ್ದ ಬೋನಿಗೆ ಸುಮಾರು ಎರಡುವರೆ ವರ್ಷದ ಹೆಣ್ಣು ಚಿರತೆಯು ಬೋನಿಗೆ ಬಿದ್ದಿದೆ. ಸ್ಥಳಕ್ಕೆ ವಲಯ ಅಧಿಕಾರಿಗಳಾದ ಆರ್ಎಫ್ಒ ಸುರೇಂದ್ರ.ಕೆ ಮತ್ತು ಸಿಬ್ಬಂದಿಗಳು ಬಂದಿದ್ದು ನಂತರ ಬೋನಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯಕ್ಕೆ ಬಿಡಲು ಇಲ್ಲಿಂದ ರವಾನಿಸಿದ್ದಾರೆ.