ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯ ಜಮೀನೊಂದರಲ್ಲಿ ಹಮ್ಮಿಕೊಂಡಿದ್ದ ನವ ಕರ್ನಾಟಕ ಸಂಕಲ್ಪ ಸಮಾವೇಶ ದಲ್ಲಿ ಪಾಲ್ಗೊಂಡು ಮಾತಮಾಡಿದರು.
ಮೊದಲಿಗೆ ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಹೇಳಿದ ಅವರು, ಸಂಡೂರಿನ ಕುಮಾರಸ್ವಾಮಿ, ದುರ್ಗಮ್ಮ, ಬೊಮ್ಮಗಟ್ಟದ ಹುಲಿಕುಂಟರಾಯನ ನ್ನು ನೆನೆದರು.
ದೇಶದ ರಾಜಕೀಯದಲ್ಲಿ ಕಾಂಗ್ರೆಸ್ ಬರೀ ಸುಳ್ಳನ್ನೇ ಹುಟ್ಟು ಹಾಕುತ್ತ ಬಂದಿದೆ. ರಾಜ್ಯದಲ್ಲೂ ಕಾಂಗ್ರೆಸ್ ಗ್ಯಾರೆಂಟಿಗಳ ಮೂಲಕ ಹೊಸ ಸುಳ್ಳನ್ನು ಹೇಳುತ್ತಾ ಹೊರಟಿದೆಂದರು.
ಬಿಜೆಪಿಯ ಪ್ರಣಾಳಿಕೆ ಸಂಕಲ್ಪ ಪತ್ರ ಆಗಿದೆ. ಅದು ದೇಶದ ನಂಬರ್ ಒನ್ ರಾಜ್ಯ ಮಾಡುವುದಾಗಿದೆ. ಅದಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬರೀ ಅದನ್ನು ತಡೆಯುತ್ತೇವೆ. ಇದನ್ನು ಹಿಂದಕ್ಕೆ ಪಡೆಯುತ್ತೇವೆ ಎಂಬ ಘೋಷಣೆ ಇವೆ. ಅಷ್ಟೇ ಅಲ್ಲ ಬಜರಂಗ ದಳವನ್ನು ನಿಷೇಧದ ಬಗ್ಗೆ ಹೇಳಿದ್ದಾರೆ ಅದಕ್ಕಾಗಿ ಆ ಪಕ್ಷಕ್ಕೆ ಸರಿತಾದ ಬುದ್ದಿಯನ್ನು ಕರ್ನಾಟಕದ ಜನತೆ ಚುನಾವಣೆಯಲ್ಲಿ ಕಲಿಸಬೇಕು ಎಂದರು.
ಭಯೋತ್ಪಾದನೆ ವಿರುದ್ಧ ಬಿಜೆಪಿ ಕಠಿಣ ನಿರ್ಧಾರ ತೆಗಡದುಕೊಂಡಾಗಲೆಲ್ಲ ಕಾಂಗ್ರೆಸ್ ಗೆ ತಳಮಳಗೊಳ್ಳುತ್ತದೆ ಯಾಕೆ ಎಂದು ಪ್ರಶ್ನಿಸಿ. ಜೀವನ, ವಿಕಾಸ, ವಿರೋಧಿಯಾದ ಭಯೋತ್ಪಾದನೆಯನ್ನು ಮಟ್ಟಹಾಕಲು ಮತ ಮುದ್ರೆ ಒತ್ತಬೇಕು ಎಂದರು.
ಭಯತ್ಪಾದನೆ ಬೆಳೆದರೆ ಇಲ್ಲಿನ ಐಟಿ, ಕೃಷಿ, ಗೌರವ ಸಂಸ್ಕೃತಿ ಎಲ್ಲಾ ಹಾಳಾಗುತ್ತದೆ. ಆದರೆ ಈಬಗ್ಗೆ ಒಂದೇ ಒಂದು ಮಾತನಾಡುತ್ತಿಲ್ಲ ಕಾಂಗ್ರೆಸ್ ಎಂದರು.ಸ್ಮಗಲಿಂಗ್ ಡ್ರಗ್ಸ್ ಮಾರಾಟದ ದಂಧೆಯಿಂದ ಭಯೋತ್ಪಾನೆ ಬೆಳೆಯುತ್ತಿದೆ. ಪಿಸ್ತೂಲಿನಿಂದ ಆಡಳಿತ ನಡೆಸುವ ಕಾಲ ಬರಲಿದೆ. ಅದಕ್ಕಾಗಿ ಎಲ್ಲರೂ ಎಚ್ಚರದಿಂದ ಇರಬೇಕು. ಭಯೋತ್ಪಾದನೆ ವಿರುದ್ದ ಧ್ವನಿ ಎತ್ತಬೇಕು ಎಂದರು. ಕೇರಳ ಸ್ಟೋರಿ ಬಗ್ಗೆ ಚರ್ಚೆಯಾಗ್ತಿದೆ
ಕೇರಳ ಸ್ಟೋರಿ ಕೇವಲ ಒಂದು ರಾಜ್ಯದಲ್ಲಿ ನಡೆದಿದೆ ಎನ್ನುತ್ತಾರೆ.. ಆದ್ರೇ ಇಷ್ಟೊಂದು ಸುಂದರ ರಾಜ್ಯದಲ್ಲಿ ಹೀಗೆ ನಡೆಯುತ್ತದೆ ಆಂದ್ರೇ ಹೇಗೆ.
ಆದ್ರೇ ಕಾಂಗ್ರೆಸ್ ಇದರ ಬಗ್ಗೆ ಮಾತನಾಡದೇ ಭಯೋತ್ಪಾದಕರ ಪರ ಮಾತನಾಡ್ತಾರೆ. ಹಿಂಭಾಗಿಲ ಮೂಲಕ ಭಯೋತ್ಪಾದಕರ ಬೆಂಬಲ ನೀಡ್ತಿದ್ದಾರೆ. ಈ ಬಗ್ಗೆ ಜನರು ಎಚ್ಚರದಿಂದ ಇರಬೇಕು.
ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ಭ್ರಷ್ಟಾಚಾರ ರಹಿತವಾಗಿ ನಡೆಯುತ್ತಿದೆ. ಆದರೆ ಕಾಂಗ್ರೆಸ್ ವರಿಷ್ಟ ರಾಜೀವ್ ಗಾಂಧಿ ಅವರೇ ಹೇಳುವಂತೆ ಕೇಂದ್ರದಲ್ಲಿ ಒಂದು ರೂ ನೀಡಿದರೆ ಗ್ರಾಮಗಳಿಗೆ ಭ್ರಷ್ಟಾಚಾರದಿಂದ 10 ರೂ ಬರುತ್ತದೆಂದು. ಶೇ 85 % ಕಮೀಷನ್ ಪಟೆಯುತ್ತದೆಂದು ಹೇಲಕಿದ್ದಾರೆಂದು ಆರೋಪಿಸಿದರು.