ಮಾಂಸಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ. ಮಾಂಸಹಾರಿ ಖಾದ್ಯಗಳಲ್ಲಿ ದೊನ್ನೆ ಬಿರಿಯಾನಿಯೂ ಒಂದು. ದೊನ್ನೆ ಬಿರಿಯಾನಿಗೆ ಕಡಿಮೆ ಪ್ರಮಾಣದ ಮಸಾಲೆಯನ್ನು ಬಳಸಲಾಗುತ್ತದೆ. ಅತಿಥಿಗಳು ಬಂದಾಗ ಅಥವಾ ಮನಸ್ಸು ಬಿರಿಯಾನಿ ತಿನ್ನಲು ಬಯಸಿದಾಗ ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ದೊನ್ನೆ ಬಿರಿಯಾನಿಯನ್ನು ತಯಾರಿಸಬಹುದಾಗಿದೆ. ಇಂದೆ ಈ ರುಚಿಯಾದ ದೊನ್ನೆ ಬಿರಿಯಾನಿ ಮಾಡಲು ಇಲ್ಲಿದೆ ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು
* ಕೋಳಿ ಮಾಂಸ- 1ಕೆಜಿ
* ಮೊಸರು- ಅರ್ಧ ಕಪ್
* ನಿಂಬೆ ಹಣ್ಣಿ ರಸ- 1ಟೀ ಸ್ಪೂನ್
* ಖಾರದ ಪುಡಿ- 1 ಟೀ ಸ್ಪೂನ್
* ಅರಿಶಿಣ- ಅರ್ಧ ಟೀ ಸ್ಪೂನ್
* ಹಸಿಮೆಣಸಿನಕಾಯಿ-4
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಪುದೀನಾ ಎಲೆ- ಸ್ವಲ್ಪ
* ಅಕ್ಕಿ- 3 ಕಪ್
* ಈರುಳ್ಳಿ-2
* ಶುಂಠಿ, ಬೆಳ್ಳುಳ್ಳಿ ಪೇಸ್ಟ್- 2 ಟೀ ಸ್ಪೂನ್
* ಪುಲಾವ್ ಎಲೆ
* ಚಕ್ಕೆ-2
* ಲವಂಗ, ನಕ್ಷತ್ರ ಮೊಗ್ಗು, ಸೋಂಪು, ಏಲಕ್ಕಿ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ನಿಂಬೆ ರಸ, ಅರಿಶಿನ, ಮೆಣಸಿನ ಪುಡಿ ಮತ್ತು ಚಿಕನ್ ಅನ್ನು ಮಿಶ್ರಣ ಮಾಡಿ 30 ನಿಮಿಷಗಳ ಕಾಲ ಬಿಡಿ.
* ಕುಕ್ಕರ್ ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ತುಪ್ಪವನ್ನು ಸೇರಿಸಿ ಬಿಸಿಯಾದ ನಂತರ ಗರಮ್ ಮಸಾಲ, ಈರುಳ್ಳಿ ಸೇರಿಸಿ, ಹೊಂಬಣ್ಣ ಬರುವ ತನಕ ಹುರಿಯಿರಿ.
* ಈಗ ಮಿಶ್ರಣಕ್ಕೆ ಚಿಕನ್ ಸೇರಿಸಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಗೊಳಿಸಿ, ಒಂದು ಸೀಟಿಯನ್ನು ಕೂಗಿಸಿಕೊಳ್ಳಬೇಕು. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಚಟ್ನಿ ಸೇರಿಸಿ, ಮಸಾಲೆ ಹುರಿಯಿರಿ.
* ಈಗ ನೆನೆಸಿಕೊಂಡ ಅಕ್ಕಿ ಮತ್ತು ನೀರನ್ನು ಕುಕ್ಕರ್ ಪಾತ್ರೆಗೆ ಸೇರಿಸಿ, ಒಂದು ಸೀಟಿಯನ್ನು ಕೂಗಿಸಿಕೊಗಿಸಿಕೊಂಡರೆ ರುಚಿಯಾದ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.