ಮದ್ದೂರು:- ಬುಧವಾರ ರಾತ್ರಿ ತಾಲೂಕಿನಾದ್ಯಂತ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಗಳು ಮನೆ ಚಾವಣಿಗಳು ಬೃಹತ್ ಗಾತ್ರದ ಮರಗಳು ಧರೆಗುಳಿದಿರುವ ಘಟನೆ ಜರುಗಿದೆ.
ಬುಧವಾರ ತಡರಾತ್ರಿ ಆರಂಭಗೊಂಡ ಬಿರುಗಾಳಿ ಸಹಿತ ಮಳೆಯು ತಾಲೂಕಿನ ಕೊಪ್ಪ ಕೆಸ್ತೂರು ಬೆಸಗರಹಳ್ಳಿ ಗುಡುಗು ಸಿಡಿಲು ಸಹಿತ ಮಳೆಯಿಂದಾಗಿ ವಿದ್ಯುತ್ ಕಂಬಗಳು ಬೃಹತ್ ಗಾತ್ರದ ಮರಗಳು ಮನೆಯ ಮೇಲ್ಚಾವಣಿ ಸೀಟುಗಳು ಹಾನಿಗೊಳಗಾಗಿವೆ ಪಟ್ಟಣದ ಶಂಕರ್ ಪೆಟ್ರೋಲ್ ಬಂಕ್ ಬಳಿ ಬೃಹತ್ ಗಾತ್ರದ ಮರ ನೆಲಕುರಳಿದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳು ಸೇರಿದಂತೆ ಪೆಟ್ರೋಲ್ ಬಂಕ್ ಹಾನಿಗೊಳಗಾಗಿದ್ದು ಜೊತೆಗೆ ಶಿವಪುರದ ವೆಂಕಟೇಶ್ವರ ರೆಸಿಡೆನ್ಸಿಯ ಸೋಲಾರ್ ಮತ್ತು ವಿದ್ಯುತ್ ಪರಿಕರಗಳು ಮೇಲ್ಚಾವಣಿಗಳು ಗಾಳಿಗೆ ತೂರಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುಳಿದ ಹಿನ್ನೆಲೆಯಲ್ಲಿ ವಿದ್ಯುತ್ ಇಲ್ಲದೆ ರಾತ್ರಿ ಇಡಿ ಕತ್ತಲಿನಲ್ಲೇ ಕಾಲ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಯಿತು ತಾಲೂಕಿನ ವಿವಿದೆಡೆ ಬೆಳೆದು ನಿಂತ ಭತ್ತ ರಾಗಿ ಪಸಲು ನೆಲಕಚ್ಚಿದು ಇದರಿಂದಾಗಿ ರೈತರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದ್ದು ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಹಲವಾರು ಹವಗಳು ಸಂಭವಿಸಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಕ್ಕೆ ಮುಂದಾಗುವಂತೆ ಸ್ಥಳೀಯರು ತಾಲೂಕ ಆಡಳಿತವನ್ನು ಒತ್ತಾಯಿಸಿದ್ದಾರೆ