ಮಂಡ್ಯ: ಮಂಡ್ಯದಲ್ಲಿ ಗಿಫ್ಟ್ ಪಾಲಿಟಿಕ್ಸ್ ಆರಂಭವಾಗಿದೆ.
ಶಿಸ್ತಿನ ಪಕ್ಷದಿಂದ ಆಮಿಷದ ರಾಜಕಾರಣ ಆರೋಪ ಕೇಳಿ ಬಂದಿದೆ.ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ ಉಡುಗೊರೆ ಹಂಚಿಕೆ ಆರೋಪ ಕೇಳಿಬಂದಿದೆ.
ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮತದಾರರಿಗೆ ಆಮಿಷ ಒಡ್ಡಿದ್ದಾರೆ.ಎರಡು ಕಡೆ ಪ್ರತ್ಯೇಕ ದಾಳಿ ನಡೆದಿದ್ದು600ಕ್ಕೂ ಹೆಚ್ಚು ಬ್ಯಾಗ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಆಕಾಂಕ್ಷಿ ಭಾವಚಿತ್ರ ಇರುವ ಬ್ಯಾಗ್ ಜೊತೆ ಅಪಾರ ಪ್ರಮಾಣದ ಉಡುಗೊರೆ ಸೀಜ್ ಮಾಡಲಾಗಿದೆ.ಮಹಿಳೆಯರಿಗೆ ಹಂಚಲು ಇಟ್ಟಿದ್ದ ಸೀರೆ, ತಟ್ಟೆ, ಅರಿಶಿಣ-ಕುಂಕುಮ ಇರುವ ಪದಾರ್ಥಗಳನ್ನ ವಶಪಡಿಸಿಕೊಳ್ಳಲಾಗಿದೆ.ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ, ನೇರಳಕೆರೆ ಗ್ರಾಮಗಳಲ್ಲಿ ಪ್ರತ್ಯೇಕ ದಾಳಿ ನಡೆದಿದೆ.ನೇರಳೆಕೆರೆ ಗ್ರಾಮದ ಬಿಜೆಪಿ ಮುಖಂಡ ಜವರೇಗೌಡರ ಮನೆಯಲ್ಲಿದ್ದ 400 ಬ್ಯಾಗ್ ವಶಕ್ಕೆ ಪಡೆಯಲಾಗಿದೆ.
ಕೊಡಿಯಾಲದ ರೈಸ್ ಮಿಲ್ ಒಂದರಲ್ಲಿ 180 ಬ್ಯಾಗ್ ವಶಕ್ಕೆ ಪಡೆಯಲಾಗಿದೆ.ಟಿಕೆಟ್ ಆಕಾಂಕ್ಷಿ ಭಾವಚಿತ್ರ ಇರುವ ಬ್ಯಾಗ್ ನಲ್ಲಿದ್ದ ಸೀರೆ, ತಟ್ಟೆ, ಅರಿಶಿಣ ಕುಂಕುಮ ವಶಕ್ಕೆ ಪಡೆಯಲಾಗಿದೆ.ಮನೆ ಮಾಲೀಕ, ರೈಸ್ ಮಿಲ್ ಮಾಲೀಕನ ವಿರುದ್ಧಅರಕೆರೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.