ಯಾದಗಿರಿ: ಮಗನನ್ನು ಪಾಸ್ ಮಾಡಿಸಲು ಹೆಡ್ ಮಾಸ್ಟರ್ ಪರೀಕ್ಷಾ ನಿಯಮವನ್ನು ಉಲ್ಲಂಘಿಸಿರುವಂತಹ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಪ್ರೌಢಶಾಲೆ ನಡೆದಿದೆ. ಗುರುಬಸಪ್ಪ ಪರೀಕ್ಷಾ ನಿಯಮವನ್ನು ಉಲ್ಲಂಘಿಸಿರುವ ಮುಖ್ಯ ಶಿಕ್ಷಕ. ಮಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 2 ಬಾರಿ ಫೇಲ್ ಆಗಿದ್ದ. 3ನೇ ಬಾರಿಗೆ ಮತ್ತೆ ಪರೀಕ್ಷೆ ಬರೆಯುತ್ತಿದ್ದ. ಪರೀಕ್ಷಾ ಚೀಫ್ ಸುಪರಿಂಟೆಂಡೆಂಟ್ ಆಗಿದ್ದ ಶಿವರಾಜ್ಗೆ ಕರೆ ಮಾಡಿ ಅಕ್ರಮಕ್ಕೆ ಸಹಕರಿಸಿ ಎಂದು ಹೆಡ್ಮಾಸ್ಟರ್ ಹೇಳಿದ್ದಾರೆ.
ಆ.2ರಿಂದ 8ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ-3 ನಡೆದಿತ್ತು. ನಿಮ್ಮ ದಯೆಯಿಂದ ಪಾಸಾಗಲಿ ಎಂದು ಗುರುಬಸಪ್ಪ ಶಿವರಾಜ್ ಬಳಿ ಬೇಡಿಕೊಂಡಿದ್ದರು. ಜೊತೆಗೆ ಗಣಿತ ವಿಷಯದ ಶಿಕ್ಷಕರು ಇದ್ದರೆ ನೋಡಿ ಎಂದು ಕೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಬೇರೊಬ್ಬ ವಿದ್ಯಾರ್ಥಿ ಕೂರಿಸಿ ಪರೀಕ್ಷೆ ಬರೆಸೋಣ ಎಂದು ಒತ್ತಡ ಹೇರಿದ್ದಾರೆ. ಅಕ್ರಮದ ವಿಚಾರದ ಬಗ್ಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಅಪರ ಆಯುಕ್ತರಿಗೆ ಶಿವರಾಜ್ ಪತ್ರ ಬರೆದಿದ್ದಾರೆ.
ಮಗನನ್ನು ಪಾಸ್ ಮಾಡಿಸಲು ಮುಖ್ಯ ಶಿಕ್ಷಕರಿಂದಲೇ ಅಕ್ರಮ
