ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಕಾಂಬಿನೇಷನ್ ನ ಮಳ್ಳಿ ಪೆಳ್ಳಿ ಸಿನಿಮಾ ರಿಲೀಸ್ ಆಗಿದೆ. ತೆಲುಗು ಚಿತ್ರರಂಗದಲ್ಲಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಈ ಸಿನಿಮಾಗಾಗಿ ಪವಿತ್ರಾ ಲೋಕೇಶ್ ಪಡೆದಿದ್ದಾರೆ ಎನ್ನಲಾದ ಸಂಭಾವನೆ ಮಾತ್ರ ಬಲು ಜೋರಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾಗಾಗಿ ಅವರು ಈವರೆಗೂ ಪಡೆಯದೇ ಇರುವಂತಹ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಸಾಮಾನ್ಯವಾಗಿ ಪವಿತ್ರಾ ಲೋಕೇಶ್ ಒಂದು ದಿನಕ್ಕೆ 50 ರಿಂದ 60 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಆದರೆ, ಮಳ್ಳಿ ಪೆಳ್ಳಿ ಚಿತ್ರಕ್ಕಾಗಿ ಅವರು ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇದು ನಿಜವೇ ಆಗಿದ್ದರೆ, ಈ ಚಿತ್ರಕ್ಕಾಗಿ ಅವರು ಎಷ್ಟು ದಿನ ಕೆಲಸ ಮಾಡಿರಬಹುದು ಮತ್ತು ದಿನಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಈಗಾಗಲೇ ಅವರೇ ಘೋಷಣೆ ಮಾಡಿಕೊಂಡಂತೆ ಇಬ್ಬರೂ ಸಹಜೀವನ ನಡೆಸುತ್ತಿದ್ದಾರಂತೆ. ಒಂದು ರೀತಿಯಲ್ಲಿ ಗಂಡ ಹೆಂಡತಿ ರೀತಿಯಲ್ಲೇ ಬದುಕುತ್ತಿದ್ದಾರಂತೆ. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಸ್ವತಃ ನರೇಶ್ ಅವರೆ. ಹಾಗಾಗಿ ಈ ಪ್ರಮಾಣದಲ್ಲಿ ಸಂಭಾವನೆ ಹರಿದು ಬಂತಾ ಎನ್ನುವುದಕ್ಕೆ ಯಾವುದೇ ಉತ್ತರವಿಲ್ಲ.
ರಿಲೇಷನ್ ಶಿಪ್, ಮದುವೆ, ಜೀವನ ಎಲ್ಲದರ ಬಗ್ಗೆಯೂ ಮಾಧ್ಯಮಗಳ ಮುಂದೆ ಇಬ್ಬರೂ ಮಾತನಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ಮಕ್ಕಳನ್ನು ಮಾಡಿಕೊಳ್ಳುವಂತಹ ಯೋಚನೆ ಇಲ್ಲವೆಂದೂ ಮಾತನಾಡಿದ್ದಾರೆ. ಆದರೆ, ಸಂಭಾವನೆ ವಿಚಾರ ಈವರೆಗೂ ಇಬ್ಬರೂ ಹೇಳಿಕೆ ನೀಡಿಲ್ಲ. ಮುಂದಿನ ದಿನಗಳಲ್ಲಿ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.