ಮಳವಳ್ಳಿ:ಕ್ಷೇತ್ರದ ಜನತೆ ಬಳಿ ಮತ ಭಿಕ್ಷೆಗೆ ತೆರಳಿದ್ದ ಶಾಸಕ ಡಾ.ಕೆ. ಅನ್ನದಾನಿ ಅವರಿಗೆ ಮತದಾರರು ಹಾಲಿನ ಅಭಿಷೇಕ ಮಾಡಿದ್ದಾರೆ. ತಾಲ್ಲೂಕಿನ ಬಾಳೆಹೊನ್ನಿಗ ಗ್ರಾಮಕ್ಕೆ ಮಂಗಳವಾರ ಶಾಸಕ ಕೆ.ಅನ್ನದಾನಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಗ್ರಾಮದ ಯುವಕರು ಶಾಸಕರಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ.
ಹಾಲಿನ ಅಭಿಷೇಕ ಮಾಡಿದ ಮತದಾರರ ಪ್ರೀತಿಗೆ ಶಾಸಕ ಅನ್ನದಾನಿ ಕೃತಜ್ಞರಾಗಿದ್ದಾರೆ. ಪಂಚರತ್ನ ಯೋಜನೆಗಳನ್ನು ಜಾರಿಗೆ ತರಬೇಕೆಂಬ ಉದ್ದೇಶದಿಂದ ಕುಮಾರಸ್ವಾಮಿ ಅವರು ಹಗಲು ರಾತ್ರಿ ಎನ್ನದೆ ರಾಜ್ಯಾದ್ಯಂತ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.ಈ ಬಾರಿ ಜೆಡಿಎಸ್ 123 ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಅನ್ನದಾನಿ ಪ್ರಚಾರದ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.