ಭಾರತೀನಗರ: ರೈತರು ಬೆಳೆದ ಬೆಳೆಗಳು ನೀರಿಲ್ಲದೆ ಒಣಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ಎಸ್ ಅಣೆಕಟ್ಟೆಯಿಂದ ನೀರನ್ನು ಬಿಡಲಾಗಿದೆ.ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.
ಭಾರತೀನಗರ ಸಮೀಪದ ಕೂಳಗೆರೆ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಸಿದ ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಕೆಆರ್ಎಸ್ ಅಣೆಕಟ್ಟೆಯಿಂದ ಕಟ್ಟುಪದ್ದತಿಯಲ್ಲಿ ಪ್ರತೀ ವರ್ಷ ೧೮ ದಿನಗಳ ಕಾಲ ನೀರನ್ನು ನೀಡಲಾಗುತ್ತಿತ್ತು.ಆದರೆ ಈ ಭಾರಿ ಕೆಆರ್ಎಸ್ ಜಲಾಶಯ ಕುಸಿದ ಹಿನ್ನೆಲೆಯಲ್ಲಿ ೧೨ ದಿನಕ್ಕೆ ಬೆಳೆಗಳಿಗೆ ನೀರುಕೊಡುವುದನ್ನು ನಿಲ್ಲಿಸಲಾಗಿತ್ತು.ಇದರಿಂದ ರೈತರು ಬೆಳೆದ ಬೆಳೆಗಳು ಒಣಗುತ್ತಿದ್ದರಿಂದ ರೈತರು ಅಧೀಕ್ಷಕ ಅಭಿಯಂತರನ್ನು ಒತ್ತಾಯಿಸಿದ ಮೇರೆಗೆ ಏ.೧ ರಾತ್ರಿ ಸುಮಾರು ೮.೩೦ ರಿಂದ ಮದ್ದೂರು ಕ್ಷೇತ್ರದ ಕಾಲುವೆಗಳಿಗೆ ನೀರನ್ನು ಬಿಡಲಾಗಿದೆ. ಇನ್ನೆರಡು-ಮೂರು
ದಿನಗಳ ಕಾಲ ಕಾಲುವೆಯಲ್ಲಿ ನೀರು ಹರಿದು ಬರಲಿದೆ. ಹಾಗಾಗಿ ರೈತರು ಬೆಳೆದಂತಹ ರಾಗಿ, ಭತ್ತ, ಬೆಳೆದು ನಿಂತಿರುವ ಕಬ್ಬಿಗೆ ನೀರನ್ನು ಉಣಿಸುವಲ್ಲಿ ಮುಂದಾಗಬೇಕೆಂದು ಸಲಹೆ ನೀಡಿದರು.
ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿ :
ಹೆಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಯನ್ನು ಜಾರಿಗೆ ತಂದು ರೈತರ ಬದುಕನ್ನು ಅಭಿವೃದ್ದಿ ಪಡಿಸಲು ಮುಂದಾಗಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ರೈತರಿಗೆ ಉಳಿಗಾಲ. ಇಲ್ಲದಿದ್ದರೆ ಜನಸಾಮಾನ್ಯರು ಬದುಕಲು ಬಹಳಷ್ಟು ಕಷ್ಟವಾಗುತ್ತದೆ. ಪ್ರಾದೇಶಿಕ ಪಕ್ಷ ಯಾವ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆಯೋ ಅಂತಹ ರಾಜ್ಯಗಳು ಅಭಿವೃದ್ದಿಯನ್ನು ಕಂಡಿವೆ. ನಮ್ಮ ರಾಜ್ಯದಲ್ಲೂ ಅಭಿವೃದ್ದಿ ಕಾಣಬೇಕಾದರೆ ಜೆಡಿಎಸ್ ಪಕ್ಷವನ್ನು ಆಯ್ಕೆಗೊಳಿಸಿ ಎಂದು ಕೋರಿದರು.
ನಾನು ಶಕ್ತಿಮೀರಿ ಕೆಲಸ ಮಾಡಿದ್ದೇನೆ :
ಮದ್ದೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಪಕ್ಷಾತೀತವಾಗಿ ಶ್ರಮಿಸಿದ್ದೇನೆ. ನನ್ನ ಶಾಸಕರ ಅವಧಿಯಲ್ಲಿ ಮಾಡಿರುವಂತಹ ಕೆಲಸಗಳು ನನಗೆ ತೃಪ್ತಿತಂದಿದೆ. ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಮುಂದೆಯೂ ಕೆಲಸ ಮಾಡಲು ನನಗೆ ಕೈಜೋಡಿಸಿ ಎಂದು ಕೋರಿದರು.
ಇದೇ ವೇಳೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಮಾದನಾಯಕ
ನಹಳ್ಳಿ ರಾಜಣ್ಣ, ಕೆಂಗಲ್ಗೌಡ, ಕೂಳಗೆರೆ ಶೇಖರ್, ನಗರಕೆರೆ ಸಂದೀಪ್ ಸೇರಿದಂತೆ ಹಲವರಿದ್ದರು.