ವರದಿ : ಸುಚಿತ್ರ ಗೌಡ
ಸಕಲೇಶಪುರ: ಸಕಲೇಶಪುರ ತಾಲ್ಲೂಕಿಗೆ ಅಟ್ಯಾಕಿಂಗ್ ಎಲಿಫೆಂಟ್ ಎಂಟ್ರಿ. ಮಲೆನಾಡು ಭಾಗಕ್ಕೆ ಬಂದಿರುವ ಮನುಷ್ಯರ ಮೇಲೆ ದಾಳಿ ಮಾಡುವ ಒಂಟಿಸಲಗ. ಕೊಡಗು ಭಾಗದಿಂದ ಬಂದಿರುವ ಗಜ. ಕಾಡಾನೆ ಕಂಡು ಭಯಭೀತಗೊಂಡ ಮಲೆನಾಡು ಭಾಗದ ಜನ.
ಸ್ಟಾಲಿನ್ ಎಂಬ ಹೆಸರಿನ ಕಾಡಾನೆ ಕೊಡಗು ಭಾಗದಿಂದ ಮಲೆನಾಡು ಭಾಗಕ್ಕೆ ಬಂದಿದೆ. ತಾಲ್ಲೂಕಿನ, ಕೊಲ್ಲಹಳ್ಳಿ ಸಮೀಪ ಒಂಟಿಸಲಗ ಸಂಚಾರ ಮಾಡುತ್ತಿದ್ದು, ಕಾಡಾನೆ ಕಂಡು ಮಲೆನಾಡು ಭಾಗದ ಜನ ಭಯಭೀತಗೊಂಡಿದ್ದಾರೆ. ಇತ್ತೀಚೆಗಷ್ಟೇ ಮನೆಗಳ ಮೇಲೆ ದಾಳಿ ಮಾಡುತ್ತಿದ್ದ ಮಕ್ನಾ ಕಾಡಾನೆಯನ್ನು ಸೆರೆ ಹಿಡಿದು ಸಕ್ಕರೆಬೈಲು ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಮಕ್ನಾ ಕಾಡಾನೆ ಸೆರೆಯಿಂದ ಮಲೆನಾಡು ಭಾಗದ ಜನ ನಿಟ್ಟುಸಿರು ಬಿಟ್ಟಿದ್ದರು. ಇದೀಗ ಸ್ಟಾಲಿನ್ ಎಂಟ್ರಿಯಿಂದ ಜನರು ಆತಂಕಗೊಂಡಿದ್ದಾರೆ. ಒಂಟಿಸಲಗದ ಚಲನವಲನ ಗಮನಿಸಿ ಎಚ್ಚರಿಕೆಯಿಂದ ಓಡಾಡುವಂತೆ ಜನರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.