ಬೆಂಗಳೂರು:- ಭಾನುವಾರ (ಮೇ22)ರಂದು ಸಂಜೆ ಸುರಿದ ಭಾರೀ ಮಳೆಯಿಂದ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರ ಆಗಿದೆ. ಈ ನಿಮಿತ್ತ ಜನರು ಪರದಾಟ ನಡೆಸಿದ್ದಾರೆ. ಇದೀಗ ಬಿಜೆಪಿ ರಾಜ್ಯಸಭಾ ಸದಸ್ಯ- ನಟ ಜಗ್ಗೇಶ್ ಅವರಿಗೂ ಮಳೆಯ ಅವಾಂತರದ ಬಿಸಿ ತಟ್ಟಿದೆ.
ನಿನ್ನೆ ಸುರಿದ ಮಳೆಯಿಂದ ಜಗ್ಗೇಶ್ ಅವರ ಕಾರು ಮುಳುಗಡೆ ಆಗಿದೆ. ಜಗ್ಗೇಶ್ ಅವರ ಮನೆಯ ರಿಪೇರಿ ಕೆಲಸ ಕಾರ್ಯಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ತಮ್ಮ BMW ಕಾರನ್ನು ಸ್ನೇಹಿತ ಮುರುಳಿ ಮನೆ ಬಳಿ ನಿಲ್ಲಿಸಿದ್ದರು.
ಮಳೆ ತಂದ ಸಂಕಷ್ಟದಿಂದ ಮುರಳಿ ಅವರ ಮನೆ- ಪಾರ್ಕಿಂಗ್ಗೆ ನೀರು ನುಗ್ಗಿದೆ. ಈ ಪರಿಣಾಮ ಜಗ್ಗೇಶ್ ಅವರ BMW ಕಾರು ಮುಳುಗಡೆಯಾಗಿದೆ. ಕೊನೆಗೂ ಹೇಗೋ ಸ್ನೇಹಿತ ಮುರಳಿ ಅವರು ಪಂಪ್ ಬಳಸಿ ನೀರು ಹೊರ ಹಾಕುವ ಕೆಲಸ ಮಾಡಿದ್ದಾರೆ. ಬೆಂಗಳೂರು ನಿನ್ನೆ ಸುರಿದ ಭಾರೀ ಮಳೆಯಿಂದ ಹತ್ತು ಅಲವು ಅನಾಹುತ ಸೃಷ್ಟಿಸಿದೆ.
ಜಗ್ಗೇಶ್ ಅವರು ಸಿನಿಮಾ- ರಾಜಕೀಯ ಎರಡರಲ್ಲೂ ಆಕ್ಟೀವ್ ಆಗಿದ್ದಾರೆ. `ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ಬಳಿಕ ಭಿನ್ನ ಕಥೆಗಳ ಮೂಲಕ ಬರಲಿದ್ದಾರೆ.