ಮೈಸೂರು: ವರುಣ ವಿಧಾನಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಂಜನಗೂಡಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ಸಿದ್ದರಾಮನಹುಂಡಿಯ ಮನೆ ದೇವರಿಗೆ ಪೂಜೆ ಸಲ್ಲಿಸಿ, ಕುಟುಂಬದ ಸದಸ್ಯರೊಂದಿಗೆ ಸಿದ್ದರಾಮೇಶ್ವರ ಹಾಗೂ ಶ್ರೀರಾಮ ಮಂದಿರದಲ್ಲಿ ದೇವರ ದರ್ಶನ ಪಡೆದರು. ನಂತರ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಹಾಗೂ ಉತ್ತನಹಳ್ಳಿ ತ್ರಿಪುರ ಸುಂದರಿ ದೇವಿಗೆ ಪೂಜೆ ಸಲ್ಲಿಸಿದರು. ನಂಜನಗೂಡಿನ ಗೂಳೂರಿನಲ್ಲಿ ಸಾರ್ವಜನಿಕ ಸಭೆ ನಡೆಸಿದರು. ವಿವಿಧ ತಾಲ್ಲೂಕುಗಳಿಂದ ಸಿದ್ದರಾಮಯ್ಯ ಅಭಿಮಾನಿಗಳು, ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ ಸಭೆಯಲ್ಲಿ ಜಮಾಯಿಸಿದ್ದರು.
ಸಿದ್ದರಾಮಯ್ಯ ಮಾತನಾಡಿ, `ಇದೇ ನನ್ನ ಕೊನೆಯ ಚುನಾವಣೆ. ಲಕ್ಷಕ್ಕೂ ಹೆಚ್ಚು ಮತದ ಅಂತರದಿAದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು. `ಅಪಾರ ಜನಸಂಖ್ಯೆಯಲ್ಲಿ ಬಂದಿರುವುದನ್ನು ನೋಡಿದರೆ ಮಾತುಗಳೇ ಹೊರಡುತ್ತಿಲ್ಲ. ಚುನಾವಣಾ ಪ್ರಚಾರಕ್ಕೆ ಎರಡು ದಿನ ಕ್ಷೇತ್ರದಲ್ಲಿರುವೆ. ಕಾರ್ಯಕರ್ತರೇ ಪಕ್ಷಕ್ಕೆ ಶಕ್ತಿ ತುಂಬಬೇಕು. ಮೈಸೂರು-ಚಾಮರಾಜನಗರದ 15 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಇತಿಹಾಸ ಸೃಷ್ಟಿಸಬೇಕು’ ಎಂದರು.
`ವರುಣ ಹೋಬಳಿಯಲ್ಲೇ ಹುಟ್ಟಿದವ ನಾನು. ನನ್ನ ಎದುರು ಬಿಜೆಪಿಗರು ಬೆಂಗಳೂರು ನಿವಾಸಿಯನ್ನು ಕರೆತಂದಿದ್ದಾರೆ. ಅವರು ಹಣದ ಹೊಳೆ ಹರಿಸುತ್ತಾರೆ. ಷಡ್ಯಂತ್ರ, ಕುತಂತ್ರ ಏನೂ ಮಾಡಿದರೂ ನಮ್ಮ ಜನರು ಸೊಪುö್ಪ ಹಾಕುವುದಿಲ್ಲವೆಂದು ಗೊತ್ತು’ ಎಂದು ಹೇಳಿದರು.
`ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದು, ಪರಿಶಿಷ್ಟರ ಮತ ವಿಭಜಿಸಲು ತಿ.ನರಸೀಪುರದ ಭಾರತಿ ಶಂಕರ್ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ವರುಣ ಜನತೆ ಸ್ವಾಭಿಮಾನಿಗಳು. ಅದಕ್ಕೆಲ್ಲ ಬಗ್ಗುವುದಿಲ್ಲ’ ಎಂದರು.
`ಇಡೀ ರಾಜ್ಯದ ಜನರು ಅಭಿಮಾನ ಪ್ರೀತಿ ತೋರುತ್ತಿದ್ದಾರೆ. ಜನರು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಯಸಿದ್ದಾರೆ. ಕೋಮುವಾದಿ ಬಿಜೆಪಿ ರಾಜ್ಯವನ್ನು ಹಾಳು ಮಾಡಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ. ಬಡವರ ಯೋಜನೆಗಳು ಕಾರ್ಯಕ್ರಮ ಗಳನ್ನು ನಿಲ್ಲಿಸಲಾಗಿದೆ. ಶೇ 40 ಕಮಿಷನ್ ಪಡೆದ ಭ್ರಷ್ಟ ಸರ್ಕಾರವಿದು. 150ಕ್ಕೂ ಹೆಚ್ಚು ಸ್ಥಾನ ಪಡೆದು ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುವ ವಿಶ್ವಾಸ ನನಗಿದೆ’ ಎಂದು ಹೇಳಿದರು.
`ಬಿಜೆಪಿಯು ಹಿರಿಯ ಮುಖಂಡರಿಗೆ ಗೌರವ ನೀಡುವುದಿಲ್ಲ. ಜಗದೀಶ್ ಶೆಟ್ಟರ್, ಲಕ್ಷಣ್ ಸವದಿ ಅವರಿಗೆ ಟಿಕೆಟ್ ಕೊಡಲಿಲ್ಲ. ಅವರು ಕಾಂಗ್ರೆಸ್ನಿAದ ಸ್ಪರ್ಧಿಸುತ್ತಿದ್ದಾರೆ. ಎರಡೂ ಪಕ್ಷದಿಂದ ಹಲವು ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ.
ಅಧಿಕಾರಕ್ಕೆ ಬರುವ ಮುನ್ಸೂಚನೆ ಸಿಗುತ್ತಿದೆ. 2008, 2013ರಲ್ಲಿ ಸುಮಾರು 30 ಸಾವಿರ ಅಂತರದಿAದ ಗೆದ್ದಿದ್ದೆ. 2018ರಲ್ಲಿ ಯತೀಂದ್ರ ಅವರನ್ನು 58 ಸಾವಿರ ಮತಗಳಿಂದ ಗೆಲ್ಲಿಸಿದ್ದೀರಿ. ನನ್ನನ್ನು ಲಕ್ಷ ಮತಗಳಿಂದ ಗೆಲ್ಲಿಸಿ’ ಎಂದು ಕೋರಿದರು.
`ಇನ್ನೆöÊದು ವರ್ಷದಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತನಾಗುವೆ. ಡಾ.ಯತೀಂದ್ರ ಹಾಗೂ ಮೊಮ್ಮಗ ಧವನ್ ರಾಕೇಶ್ ಇದ್ದಾರೆ. ಧವನ್ಗೆ 17 ವರ್ಷವಷ್ಟೇ. ರಾಜಕೀಯಕ್ಕೆ ಬರಲು ಇನ್ನೂ 8 ವರ್ಷ ಬೇಕು. ಅವನ ಮೇಲೆ ತೋರಿಸುತ್ತಿರುವ ಪ್ರೀತಿ ನೋಡಿದರೆ ರಾಕೇಶ್ ನೆನಪಾಗುತ್ತಿದ್ದಾನೆ. ಆತ ವರುಣಾ ಚಾಮುಂಡೇಶ್ವರಿಯಲ್ಲಿ ಜನಪ್ರಿಯನಾಗಿದ್ದ’ ಎಂದು ಭಾವುಕರಾದರು.
ಮುಖಂಡರಾದ ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಸತೀಶ್ ಜಾರಕಿಹೊಳಿ, ಡಾ.ಯತೀಂದ್ರ ಸಿದ್ದರಾಮಯ್ಯ, ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಇದ್ದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಹರೀಶ್ ಗೌಡ ಅವರು ಇಂದು ಕೆ.ಜಿ.ಕೊಪ್ಪಲ್ ನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಮೈಸೂರು ಮಹಾನಗರ ಪಾಲಿಕೆಗೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಕರ್ನಾಟಕ ಪ್ರಜಾ ಪಾರ್ಟಿಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಬಿ.ಶಿವಣ್ಣ ಅವರು ಮೈಸೂರು ಅರಮನೆ ಬಳಿ ಇರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಹಾಗೂ ಮೆರವಣಿಗೆ ಮೂಲಕ ಅಪಾರ ಬೆಂಬಲಿಗರೊಂದಿಗೆ ಮಿನಿವಿಧಾನಸೌಧಕ್ಕೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ
![](https://stateroute.in/wp-content/uploads/no-image.jpg)