ಹನೂರು:- ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಣ್ಣೆತ್ತಿನ ಅಮವಾಸ್ಯೆ ವಿಶೇಷವಾಗಿ ಸಹಸ್ರಾರರು ಭಕ್ತಸಾಗರ ಹರಿದು ಬಂದಿದ್ದು ಸಂಪೂಣ9 ಟ್ರಾಫಿಕ್ ಜಾಮ್ ಆಗಿದೆ.
ಅಮಾವಸೆ ವಿಶೇಷವಾಗಿ ಸಹಸ್ರಾರು ಭಕ್ತಸಾಗರ ಹರಿದು ಬಂದಿದ್ದು. ಇದರಲ್ಲಿ ಪುರುಷರು ಮಕ್ಕಳೆನ್ನದೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ವಿಶೇಷವಾಗಿದೆ.
ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಿರುವುದರಿಂದ. ಇದರ ಸದುಪಯೋಗಕ್ಕೆ ಮುಂದಾದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ತಾಲೂಕು ಸೇರಿದಂತೆ ಜಿಲ್ಲೆಯ ವಿದೆಡೆಗಳಿಂದ ಮಹಿಳೆಯರೇ ಹೆಚ್ಚಾಗಿ ಮಾದಪ್ಪನ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.
ಮಹದೇಶ್ವರ ಬೆಟ್ಟದಿಂದ ತಾಳು ಬೆಟ್ಟದ ವರಗೆ ಸಂಪೂಣ9 ಟ್ರಾಫಿಕ್ ಜಾಮ್ ಪ್ರತಿಯೊಂದು ವಾಹನಗಳು ಹೆಜ್ಜೆ ಹೆಜ್ಜೆ ಹಾಕುತ ಸಾಗಿದವು.