ಮೈಸೂರು: ಮಾಲೀಕರ ಗಮನ ಬೇರೆಡೆ ಗಲ್ಲಾಪೆಟ್ಟಿಗೆಯಲ್ಲಿದ್ದ 1.30 ಲಕ್ಷ ನಗದು ದೋಚಿ ಪರಾರಿಯಾದ ಘಟನೆ ಮೈಸೂರಿನ RMC ಯಲ್ಲಿ ನಡೆದಿದೆ.ಮೂವರು ಖತರ್ ನಾಕ್ ಕಳ್ಳರಿಂದ ಕೃತ್ಯ ನಡೆದಿದೆ.ಸ್ಟಾಲ್ ನಂ 72 ರಲ್ಲಿ ಘಟನೆ ನಡೆದಿದೆ.ಕಮೀಷನ್ ಏಜೆಂಟ್ ಆಗಿರುವ ಅಯಾಜ್ ಎಂಬುವರಿಗೆ ಸೇರಿದ ಮಳಿಗೆಯಲ್ಲಿ ಕೃತ್ಯ ನಡೆದಿದೆ.ಹೋಲ್ ಸೇಲ್ ದರದಲ್ಲಿ ಹಣ್ಣು ಖರೀದಿಸುವ ಸೋಗಿನಲ್ಲಿ ಬಂದ ಖದೀಮರು ಮಾಲೀಕರ ಗಮನವನ್ನ ಬೇರೆಡೆ ಸೆಳೆದು ಹಣ ಲಪಟಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಸಂಭಂಧ ಮಂಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ಖದೀಮರ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಕಳ್ಳರ ಸೆರೆಗೆ ಪೊಲೀಸರು ಜಾಲ ಬೀಸಿದ್ದಾರೆ.