ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ಟೇಜ್ ಪಂದ್ಯಕ್ಕೆ ತಾತ್ಕಲಿಕವಾಗಿ ಮೂಹರ್ತ ಫಿಕ್ಸ್ ಆಗಿದೆ. ಈ ಪಂದ್ಯಕ್ಕೆ ಮಾ.1ರಂದು ಲಾಹೋರ್ ಅತಿಥ್ಯ ನೀಡಲಿದೆ.
ವೆಸ್ಟ್ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ರೋಹಿತ್ ಪಡೆ ಇನ್ನೇನು ಕೆಲವೇ ಘಂಟೆಗಳಲ್ಲಿ ಭಾರತಕ್ಕೆ ಆಗಮಿಸಲಿದೆ. ಈ ಮಧ್ಯೆ ಚಾಂಪಿಯನ್ಸ್ ಟ್ರೋಫಿಯ ತಾತ್ಕಾಲಿಕ ವೇಳಾ ಪಟ್ಟಿ ಪ್ರಕಟವಾಗಿದೆ.
ಈ ತಾತ್ಕಾಲಿಕ ವೇಳಾ ಪಟ್ಟಿಗೆ ಇನ್ನು ಬಿಸಿಸಿಐ ಒಪ್ಪಿಗೆ ನೀಡಿಲ್ಲ ಎಂದು ಐಸಿಸಿಯಿಂದ ತಿಳಿದು ಬಂದಿದೆ.
ಮಾ.1ರಂದು ಭಾರತ-ಪಾಕಿಸ್ತಾನ ಪಂದ್ಯ
