ಮೈಸೂರು: ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತವಾಗಿದೆ. ಜೀತಕ್ಕಿಟ್ಟುಕೊಂಡು ತೋಟದಲ್ಲಿ ಕೂಡಿಹಾಕಿದ್ದ ನೇಪಾಳ ಮೂಲದ ಮಹಿಳೆ, ಇಬ್ಬರು ಮಕ್ಕಳನ್ನು ತಾಲೂಕು ಆಡಳಿತ ರಕ್ಷಣೆ ಮಾಡಿರುವಂತಹ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕೈಲಾಸಪುರ ಗ್ರಾಮದಲ್ಲಿ ನಡೆದಿದೆ. ಇಡೀ ದಿನ ಕೂಲಿ ಕೆಲಸ ಮಾಡುವ ಮಹಿಳೆಗೆ ಹಲವು ಭಾರಿ ಹಲ್ಲೆ ನಡೆಸಿದ್ದು, ಅಲ್ಲದೇ ಪುಟಾಣಿ ಮಕ್ಕಳಿಂದಲೂ ದುಡಿಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ.
ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತ ಇರುವ ಘಟನೆಯೊಂದು ಬೆಳಕಿಗೆ ಬಂದಿದೆ. ಜೀತಕ್ಕಿಟ್ಟುಕೊಂಡು ತೋಟದಲ್ಲಿ ಕೂಡಿಹಾಕಿದ್ದ ನೇಪಾಳ ಮೂಲದ ತಾಯಿ ಮತ್ತು ಇಬ್ಬರು ಮಕ್ಕಳ ರಕ್ಷಣೆ ಮಾಡಿರುವಂತಹ ಘಟನೆ ಹೆಚ್ ಡಿ ಕೋಟೆ ತಾಲ್ಲೂಕಿನ ಕೈಲಾಸಪುರ ಗ್ರಾಮದಲ್ಲಿ ನಡೆದಿದೆ. ಎಚ್.ಬಿ.ಬಸವರಾಜು ಅವರ ಮಾಹಿತಿ ಮೇರೆಗೆ ಸ್ಥಳಕ್ಕೆ ತಹಶೀಲ್ದಾರ್ ಶ್ರೀನಿವಾಸ್, ಸಿಡಿಪಿಒ ಆಶಾ, ಸಮಾಜ ಕಲ್ಯಾಣ ಇಲಾಖೆ ರಾಮಸ್ವಾಮಿ, ಗಿರಿಜನ ಅಭಿವೃದ್ದಿ ಇಲಾಖೆ ನಾರಾಯಣಸ್ವಾಮಿ ಭೇಟಿ ನೀಡಿ ರೈತ ಈರೇಗೌಡರ ಜಮೀನಿನಲ್ಲಿದ್ದ ಮಹಿಳೆ ಮತ್ತು ಮಕ್ಕಳ ರಕ್ಷಣೆ ಮಾಡಿ ಸಿಡಿಪಿಒ ವಶಕ್ಕೆ ನೀಡಲಾಗಿದೆ.
ಇಡೀ ದಿನ ಕೂಲಿ ಕೆಲಸ ಮಾಡುವ ಮಹಿಳೆಗೆ ಹಲವು ಭಾರಿ ಹಲ್ಲೆ ನಡೆಸಿ ಊಟಕ್ಕೂ ನೀಡದೆ ಉಪವಾಸ ಇರಿಸಲಾಗಿದೆ. ಅಲ್ಲದೇ ಪುಟಾಣಿ ಮಕ್ಕಳಿಂದಲೂ ದುಡಿಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ. ಸ್ವಗ್ರಾಮಕ್ಕೆ ತೆರಳಲು ಬಿಡದೆ ಬಲವಂತವಾಗಿ ಕೆಲಸ ಮಾಡಿಸುತ್ತಿದ್ದ. ಸದ್ಯ ವಾಸ ಇದ್ದ ತೋಟದ ಮನೆಯಿಂದ ಮಹಿಳೆ ಮತ್ತು ಇಬ್ಬರು ಮಕ್ಕಳ ರಕ್ಷಣೆ ಮಾಡಲಾಗಿದೆ.