ಮೈಸೂರು- ಹಾಡು ಹಗಲೆ ರೌಡಿಶೀಟರ್ ನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ನಡೆದಿದೆ.ಮೈಸೂರಿನ ಒಂಟಿಕೊಪ್ಪಲ್ ವಾಸಿ ಚಂದು ಅಲಿಯಾಸ್ ಚಂದ್ರಶೇಖರ್ ಅಲಿಯಾಸ್ ಕುಂಡ ಕೊಲೆಯಾದವನು.
ಮೈಸೂರಿನ ಒಂಟಿಕೊಪ್ಪಲ್ ಮೈನ್ ರೋಡ್ ನಲ್ಲಿ ಈ ಘಟನೆ ನಡೆದಿದೆ. ಅದೂ ವಿ.ವಿ.ಪುರಂ ಪೋಲಿಸ್ ಸ್ಟೇಷನ್ ಅನತಿ ದೂರದಲ್ಲಿ ಕೊಲೆಯಾಗಿದೆ.ಇಂದು ಸಂಜೆ ನಾಲ್ಕೂವರೆ ಗಂಟೆ ವೇಳೆಯಲ್ಲಿ ಕೊಲೆಯಾಗಿದೆ. ಚಂದು ಅಲ್ಲೆ ನಾನ್ ವೆಜ್ ಫಾಸ್ಟ್ ಫುಡ್ ನಡೆಸುತ್ತಿದ್ದನು.ಈತ ದೇವು ಮರ್ಡರ್ ಕೇಸ್ ನಲ್ಲಿ ಆರೋಪಿ ಆಗಿದ್ದನು. ಆ ಕೊಲೆ ಸೇಡಿಗೆ ಚಂದುವನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.