ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ದೀಪಕ್ ಅವರು 149 ಮತಗಳನ್ನು ಪಡೆದು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಗರ ಉಪಾಧ್ಯಕ್ಷರಾಗಿ ರವಿ ಪಾಂಡವಪುರ, ಗ್ರಾಮೀಣ ಉಪಾಧ್ಯಕ್ಷರಾಗಿ ಹೆಚ್ ಎಸ್ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ಖಜಾಂಜಿಯಾಗಿ ಸುರೇಶ್ ಎಸ್ ಅವರುಗಳು ಆಯ್ಕೆಯಾಗಿದ್ದಾರೆ.
2ನೇ ಬಾರಿಗೆ ಅವರು ಸಂಘದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಚುನಾವಣೆಯಲ್ಲಿ 148 ಮತಗಳನ್ನು ಪಡೆದು ಜಯಗಳಿಸಿದರು. ಸಮೀಪದ ಪ್ರತಿಸ್ಪರ್ಧಿ ಕಿರಣ್ಕುಮಾರ್ 98 ಮತ ಪಡೆದಿದ್ದಾರೆ. ಕೃಷ್ಣೋಜಿರಾವ್ ನಗರ ಕಾರ್ಯದರ್ಶಿ ಸ್ಥಾನದಲ್ಲಿ 2 ಮತಗಳಿಂದ ರೋಚಕ ಜಯ ಸಾಧಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ವಿವರ ಇಂತಿದೆ.
ಎಂ.ಟಿ ಯೋಗೇಶ್ ಕುಮಾರ್, ಕವಿತಾ ಎಸ್, ಅನಗೋಡು ನಟರಾಜು, ಡಿ.ಜೆ ರೋಜಾ ಮಹೇಶ್, ನಾಣಿ ಹೆಬ್ಬಾಳ್, ಜೆ.ರವಿಚಂದ್ರ ಹಂಚ್ಯ, ಹಂಪಾ ನಾಗರಾಜು, ಸೋಮಶೇಖರ್ ಚಿಕ್ಕಮರಳ್ಳಿ, ಜೆ ಶಿವಣ್ಣ, ಸತೀಶ್ ಆರ್ ದೇಪುರ, ದೊಡ್ಡನ ಹುಂಡಿ ರಾಜಣ್ಣ, ಹುಲ್ಲಹಳ್ಳಿ ಮೋಹನ, ಪುನೀತ್ ಎಸ್, ರಾಜು ಕಾರ್ಯ, ಸಿಎನ್ ವಿಜಯ್ ಇವರುಗಳು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.