ಪ್ಯಾರಿಸ್:- ಒಲಿಂಪಿಕ್ಸ್ ಆಟಗಾರ್ತಿಯೊಬ್ಬಳು ಪ್ರೇಮದೂರಿನಲ್ಲಿ ತಮ್ಮ ಪ್ರೇಮಿಯೊಂದಿಗೆ ಪ್ರಣಯಕ್ಕೆ ಬಿದ್ದು ಒಲಿಂಪಿಕ್ಸ್ ಕ್ರೀಡಾಕೂಟದಿಂದಲೇ ಆಚೆ ಹಾಕಿಸಿಕೊಂಡಿದ್ದಾಳೆ.
ಕ್ಷಣಿಕ ಸುಖಕ್ಕೆ ಸೋಲದೆ ಇದ್ದರೆ ಮೋಹಕು ಅಪಮಾನ ಅನ್ನೋ ಮಾತಿದೆ. ಆ ಕ್ಷಣಿಕ ಸುಖದ ಹಿಂದೆ ಹೋದ ಒಲಿಂಪಿಕ್ಸ್ ಕ್ರೀಡಾಪಟುವೊಬ್ಬರು ಒಲಿಂಪಿಕ್ಸ್ ಅಂಗಳದಿಂದಲೇ ಆಚೆ ಹಾಕಿಸಿಕೊಂಡಿದ್ದಾರೆ. ಪ್ಯಾರಿಸ್ ಅಂದ್ರೆನೇ ಪ್ರಣಯಕ್ಕೆ, ಪ್ರೇಮಕ್ಕೆ, ಮೋಹಕ್ಕೆ ಮತ್ತೊಂದು ಹೆಸರು. ಪ್ರೇಮಿಗಳಿಗೆ ವಿಹರಸಲೆಂದೇ ಈ ನಗರ ನಿರ್ಮಾಣವಾಗಿದೆಯೇನೋ ಅನ್ನೋ ಮಟ್ಟಕ್ಕೆ ಸೌಂದರ್ಯವನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಜಗತ್ತಿನ ಸುಂದರ ನಗರಗಳಲ್ಲೊಂದು ಪ್ಯಾರಿಸ್. ಸದ್ಯ ಪ್ಯಾರಿಸ್ ನಲ್ಲಿ ಒಲಿಂಪಿಕ್ಸ್ ನ ಭರಾಟೆ ಜೋರಾಗಿ ನಡೆದಿದೆ.
ಒಲಿಂಪಿಕ್ಸ್ ಕ್ರೀಡಾಕೂಟದ ಹಬ್ಬ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ವಿಶ್ವದ ನೂರಾರು ರಾಷ್ಟ್ರಗಳು, ಸಾವಿರಾರು ಕ್ರೀಡಾಳುಗಳು ಕ್ರೀಡಾ ಅಂಗಳದಕ್ಕಿಳಿದು ಪದಕದ ಬೇಟೆಗಳಲ್ಲಿ ಇನ್ನೂ ಮುಳುಗಿದ್ದಾರೆ. ಕೆಲವು ಗೆದ್ದಿದ್ದಾರೆ, ಕೆಲವರು ಸೋತಿದ್ದಾರೆ, ಇನ್ನು ಕೆಲವರು ಸೋತು ಗೆದ್ದಿದ್ದಾರೆ. ಆದ್ರೆ ಸೋಲು ಗೆಲುವಿನ ಗುರಿಯನ್ನು ಆಚೆಯಿಟ್ಟು ಆಟವನ್ನು ಆಟವನ್ನಾಗಿ ಆಡಿ ಕ್ರೀಡಾಸ್ಪೂರ್ತಿ ಮೆರೆದಿದ್ದಾರೆ. ಆದ್ರೆ ಇದೆಲ್ಲದ ನಡುವೆ ಒಂದು ವಿಷಯ ಈಗ ಆಚೆ ಬಂದಿದೆ. ಬ್ರೆಜಿಲ್ ನ ಒಬ್ಬ ಆಟಗಾರ್ತಿ ಒಲಿಂಪಿಕ್ಸ್ ನಿಂದಲೇ ಆಚೆ ಹಾಕಿಸಿಕೊಂಡಿದ್ದಾಳೆ ಎಂಬ ಸುದ್ದಿಯೊಂದು ಈಗ ಹೊರಬಿದ್ದದೆ
22 ವರ್ಷದ ಬ್ರೆಜಿಲ್ ನ ಈಜುಗಾರ್ತಿ ಎನಾ ಕೈರೋಲಿನಾ ವಿರಾ ಒಲಿಂಪಿಕ್ಸ್ ಆಟದ ನಿಯಮದಾಚೆ ತನ್ನ ಬಾಯ್ ಫ್ರೆಂಡ್ ಜೊತೆ ನೈಟ್ ಔಟ್ ಗೆ ಹೋಗಿ ಒಲಿಂಪಿಕ್ಸ್ ಸ್ಫರ್ಧೆಯಿಂದ ಆಚೆ ಹಾಕಿಸಿಕೊಂಡಿದ್ದಾಳೆ.ಯಾವುದೇ ಅನುಮತಿ ಪಡೆಯದೇ ಬಾಯ್ ಫ್ರೆಂಡ್ ಜೊತೆ ಪ್ರೇಮದೂರಿನಲ್ಲಿ ನಡುರಾತ್ರಿ ಸುತ್ತಾಡಿವೆ ಪ್ರಣಯದ ಹಕ್ಕಿಗಳು, ಇದು ದೊಡ್ಡ ಸುದ್ದಿಯಾಗಿದ್ದು, ಒಲಿಂಪಿಕ್ಸ್ ಕ್ರೀಡೆಯ ನಿಯಮ ಉಲ್ಲಂಘನೆಯಾಗಿದ್ದರಿಂದಾಗಿ ಎನಾ ಕೈರೋಲಿನಾಳನ್ನ ಒಲಿಂಪಿಕ್ಸ್ ಕ್ರೀಡಾಕೂಡದಿಂದ ಆಚೆ ಹಾಕಿದ್ದಾರೆ. ಅದರ ಜೊತೆಗೆ ಆಕೆಯ ಬಾಯ್ ಫ್ರೆಂಡ್ ಗೆಬ್ರಿಯಲ್ ಸೈಂಟೋಸ್ ಗೆಬ್ರಿಯಲ್ ಕೂಡ ಬ್ರಿಜೆಲಿಯನ್ ಈಜುಗಾರ.
ಹಿಂದಿನ ದಿನ ಎನಾ ಕೈರೋಲಿನಾ 4*100 ಫ್ರಿಸ್ಟಾಯ್ಲ್ ರಿಲೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಏಳನೇ ಸ್ಥಾನ ಪಡೆದಿಕೊಂಡಿದ್ದರು. ಅದೇ ದಿನ ರಾತ್ರಿ ಗೆಬ್ರಿಯಲ್?ನೊಂದಿಗೆ ಎನಾ ಕೈರೋಲಿನಾ ವೀರಾ ತನ್ನ ಬಾಯ್ ಫ್ರೆಂಡ್ ಜೊತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸದೆ ಒಲಿಂಪಿಕ್ಸ್ ನಗರವನ್ನು ತೊರೆದು ಆಚೆ ಹೋಗಿದ್ದಾಳೆ. ಕೊನೆಗೆ ಆಕೆಯ ವೈಯಕ್ತಿಕ ಸೋಶಿಯಲ್ ಮಿಡಿಯಾದ ಅಕೌಂಟ್ ನಲ್ಲಿ ಫೆÇೀಟೋ ಕಂಡ ಬಳಿಕ ಒಲಂಪಿಕ್ಸ್ ಬ್ರೆಜಿಲ್ ಒಲಿಂಪಿಕ್ಸ್ ಸಮಿತಿ ಆಕೆಯನ್ನು ಕರೆದು ವಿಚಾರಣೆ ಮಾಡಿ ವಿರಾಳನ್ನ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಆಚೆ ಹಾಕಲಾಗಿದೆ .
ಮೈ ಮರೆತು ಬಾಯ್ ಫ್ರೆಂಡ್ ಜೊತೆ ನೈಟ್ ಔಟ್ ಹೋಗಿದ್ದಕ್ಕೆ ಒಲಿಂಪಿಕ್ಸ್ ನಿಂದಲೇ ಔಟ್
