ಚಾಮರಾಜನಗರ:- ಚುನಾವಣೆಯ ಹೊಸ್ತಿಲಲ್ಲಿ ಪ್ರಧಾನಿ ನರೇಂದ್ರಮೋದಿಯವರು ತಿಂಗಳಿಗೆ 3ಬಾರಿ ಕರ್ನಾಟಕ ರಾಜ್ಯಕ್ಕೆ ಬರುವ ಮೂಲಕ ಪ್ರಧಾನಿ ಹುದ್ದೆಗೆ ಅಗೌರವ ತೋರಿಸಿದ್ದಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ನಾಗರಾಜ್ ಲೇವಡಿ ಮಾಡಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಲ್ಲಂಬಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಒಬ್ಬ ಪ್ರಧಾನಿ ಎಂದರೆ ಅವರು ಕಾರ್ಯಾಲಯದಲ್ಲಿ ಕುಳಿತುಕೊಂಡು ಒಂದು ಮಾತು ಹೇಳಿದ್ದಾರೆ ದೇಶದ ಜನ ಅವರಿಗೆ ಬೆಂಬಲ ಕೊಡಬೇಕು. ಅದನ್ನು ಬಿಟ್ಟು ಅವರೇ ಬೀದಿಗಿಳಿದು ತಿಂಗಳಿಗೆ ನಾಲ್ಕು ಸಾರಿ ಬಂದು ಜನರ ಮುಂದೆ ಓಡಾಡುವುದು ಅದು ಪ್ರಧಾನಿಯ ಸ್ಥಾನಕ್ಕೆ ಅಗೌರವ ಎಂದರು.
ಕಾಡುಪ್ರಾಣಿ, ಮಾನವ ಸಂಘರ್ಷ ತಡೆಬೇಕು:
ಕಾಡುಪ್ರಾಣಿ, ಮಾನವ ಸಂಘರ್ಷ ತಡಬೇಕು. ಕಾಡಿನಲ್ಲಿ ಪ್ರಾಣಿಗಳಿಗೆ ತೊಂದರೆಯಾಗಬಾರದು. ಕಾಡುಪ್ರಾಣಿಗಳು ನಾಡಿನತ್ತ ಬರಬಾರದು. ಪ್ರಾಣಿಗಳ ರಕ್ಷಣೆ ಮಾಡುವುದು ಸರ್ಕಾರ ಕರ್ತವ್ಯ. ಕಾಡ್ಗಿಚ್ಚು ಬಗ್ಗೆ ಎಚ್ಚರ ವಹಿಸಬೇಕು. ಜಲಾಶಯಗಳ ಹಿನ್ನೀರಿನಲ್ಲಿ ಮುಳುಗಿ ಪ್ರಾಣಿಗಳು ಸಾಯುತ್ತಿವೆ. ಪ್ರಾಣಿಗಳ ರಕ್ಷಣೆಗೆ ವಿಶೇಷವಾದ ಗಮನ ಕೊಡಬೇಕು. ಜನ, ಜಾನುವಾರಿಗಳಿಗೆ ಕಾಡುಪ್ರಾನಿಗಳಿಂದ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಆನೆಗಳು ಅರಣ್ಯದಿಂದ ರೈತರ ಜಮೀನಿಗಳಿಗೆ ಬಾರದಂತೆ ಕಂದಕ ನಿರ್ಮಾಣ ಮಾಡಬೇಕು. ಇದನ್ನು ಸರಿಪಡಿಸುವಂತೆ ಅನೇಕ ಬಾರಿ ಸರ್ಕಾರಕ್ಕೆ ಒತ್ತಾಯ ಮಾಡಿದರು ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಹುಲಿಗಳ ಸಂಖ್ಯೆ ಹೆಚ್ಚಳ ಸಂತಸ: ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ ಆಗುತ್ತಿರುವುದು ಸಂತಸ ತಂದಿದೆ. ಅದರಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿರುವುದು ತುಂಬಾ ಖುಷಿಯಾಗಿದೆ. ಪ್ರಧಾನಿ ನರೇಂದ್ರಮೋದಿ ಭಾರತಕ್ಕೆ ಚೀತಾ ಪ್ರಾಣಗಳನ್ನು ತಂದರು. ಮಧ್ಯಪ್ರದೇಶ ಕಾಡಿನಲ್ಲಿ ಬಿಡುಗಡೆ ಮಾಡಿದರು. ಆದರೂ ಒಂದು ಚೀತಾ ಸತ್ತುಹೋಯಿತು. ಜವಾಬ್ದಾರಿ ವಹಿಸಬೇಕಾಗಿತ್ತು. ಈ ದೃಷ್ಠಿಯಿಂದ ಕಾಡುಪ್ರಾಣಿಗಳ ರಕ್ಷಣೆ ಮಾಡಬೇಕಾದ್ದು ಮೊದಲ ಆದ್ಯ ಕರ್ತವ್ಯವಾಗಿದೆ.
ಪ್ರಧಾನಿಮಂತ್ರಿಗಳು ಕರ್ನಾಟಕಕ್ಕೆ ಬರುವುದು ಸ್ವಾಗತಾರ್ಹ, ರಾಷ್ಟ್ರಪ್ರತಿ, ಉಪರಾಷ್ಟ್ರಪತಿ, ಕೇಂದ್ರ ಸಚಿವರು ಎಲ್ಲಿಗೆಬೇಕಾದರೂ ಹೋಗಬಹುದು ಆದರೆ ದೇಶದಲ್ಲಿ ಪ್ರಧಾನಿ ಸ್ಥಾನ ಎತ್ತರವಾದ ಹುದ್ದೆ ಆದರೆ ಪ್ರಧಾನಿಯವರು ತಮ್ಮ ಗೌರವವನ್ನು ಅವರೇ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಭೋಗಾಪುರ, ಕೆಲ್ಲಂಬಳ್ಳಿ, ಕಾಳನಹುಂಡಿ ಸೇರಿದಂತೆ ಇತರ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಈ ಬಾರಿ ನನಗೊಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವರದನಾಯಕ, ಬಸಪ್ಪನಪಾಳ್ಯ ಕುಮಾರ್, ಮಲ್ಲಿಕಾರ್ಜುನ,ಮಹೇಶ್, ಚಿಕ್ಕಮೋಳೆ ಶಿವಣ್ಣ, ಶಿವಲಿಂಗಮೂರ್ತಿ ಇತರರು.