ಮೈಸೂರು: ಇಂದು ನಾಡಿನಾದ್ಯಂತ ಯುಗಾದಿ ಹಬ್ಬ ಮನೆ ಮಾಡಿದೆ. ಎಲ್ಲೆಲ್ಲೂ ತಳಿರು, ತೋರಣಗಳಿಂದ ಮನೆಗಳು ಶೃಂಗಾರಗೊಂಡಿವೆ. ಇನ್ನು ಹಬ್ಬಕ್ಕೆಂದು ಹೂ ಹಣ್ಣಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದರೆ ಶಾಕ್ ಕಾದಿದೆ.
ಹಬ್ಬದ ಹಿನ್ನೆಲೆ ಸಾಮಾನ್ಯ ದಿನಕ್ಕಿಂತ ಇಂದು ಹೂ, ಹಣ್ಣು ಬೆಲೆಗಳು ಗಗನಕ್ಕೇರಿವೆ. ಅಲ್ಲದೆ ಹಬ್ಬದ ಸಾಮಾಗ್ರಿಗಳನ್ನು ಕೊಳ್ಳಲು ನಗರವಾಸಿಗಳು ಕೆ. ಆರ್ ಮಾರ್ಕೆಟ್ನತ್ತ ಜನರು ಹೊರಟಿದ್ದು, ಮಾರುಕಟ್ಟೆಯಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನ ಇದ್ದಾರೆ. ಹೀಗಾಗಿ ದೇವರಾಜ ಮಾರ್ಕೆಟ್ನಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ.
ನಗರದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು, ಬೆಳಿಗ್ಗೆಯಿಂದ ವಿಶೇಷ ಪೂಜೆ ಕೈಂಕರ್ಯಗಳು ನಡೆಯುತ್ತಿವೆ. ದೇವರ ದರ್ಶನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ದೇವಸ್ಥಾನಕ್ಕೆ ಬರುವ ಎಲ್ಲ ಭಕ್ತರು ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ.