ಎಸ್ ಮಂಜು ಮಳವಳ್ಳಿ
ಮಳವಳ್ಳಿ:ಪಟ್ಟಣದ ಐಟಿಐ ಕಾಲೇಜು ಹಿಂಭಾಗ ಇರುವ 7ನೇ ವಾರ್ಡಿನಲ್ಲಿ ಚರಂಡಿ ಹಾಗೂ ಯುಜಿಡಿ ಅವ್ಯವಸ್ಥೆಯನ್ನು ಖಂಡಿಸಿ ಇಂದು ಪುರಸಭೆ ಮುಂದೆ 7ನೇ ವಾರ್ಡಿನ ನಿವಾಸಿಗಳು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು .
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಭರತ್ ರಾಜ್ ಮಾತನಾಡಿ ಪುರಸಭೆಯ ಮುಖ್ಯ ಅಧಿಕಾರಿಯಾಗುವ ಅಧ್ಯಕ್ಷರು ವಾರ್ಡಿನ ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲವಾಗಿದ್ದಾರೆ ಏಳನೇ ವಾರ್ಡಿನಲ್ಲಿ ಚರಂಡಿ ಮತ್ತು ಯುಜಿಡಿ ವ್ಯವಸ್ಥೆಯು ಅವ್ಯವಸ್ಥೆಯಿಂದ ಕೂಡಿದೆ.
ಪುರಸಭೆಯ ಮುಖ್ಯ ಅಧಿಕಾರಿಯಾಗುವ ಅಧ್ಯಕ್ಷರು ವಾರ್ಡಿನ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು .
ಪ್ರತಿಭಟನೆಯಲ್ಲಿ ವಾರ್ಡಿನ ನಿವಾಸಿಗಳಾದ ಚಿಕ್ಕ ಮೊಗಣ್ಣ ಸೇರಿದಂತೆ
ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಲಿಂಗರಾಜ್ ಮೂರ್ತಿ ತಿಮ್ಮೇಗೌಡ
ಹಲವರು ಪಾಲ್ಗೊಂಡಿದ್ದರು .