ಮೈಸೂರು: ಇಂದಿನ ತಾಂತ್ರಿಕ ಜೀವನದಲ್ಲಿ ಯೋಗಾಭ್ಯಾಸವೂ ಅತಿಮುಖ್ಯವಾಗಿದೆ ಎಂದು ಮೈಸೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಎಸ್.ಟಿ.ರವಿಕುಮಾರ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪರಮಹಂಸ ಯೋಗ ಮಹಾವಿದ್ಯಾಲಯದ ಇಂಟರ್ ನ್ಯಾಷನಲ್ ಯೋಗ ಶಿಕ್ಷಕ-ಐವೈಟಿ ಟ್ರೈನಿಂಗ್ ಕೋರ್ಸ್ ಉದ್ಘಾಟನೆ ಹಾಗೂ ೧೦ನೇ ತಂಡದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಯೋಗಚಾರ್ಯ ಪ್ರಶಸ್ತಿ ಪತ್ರಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮೈಸೂರಿನಲ್ಲಿ ಸ್ವತಃ ಪ್ರಧಾನಿ ನರೇಂದ್ರಮೋದಿಯವರೇ ಯೋಗ ಪ್ರದರ್ಶನ ಮಾಡುವ ಮೂಲಕ ವಿದೇಶದಲ್ಲಿಯೂ ಮೈಸೂರು ಯೋಗದ ಮಹತ್ವ ಸಾರಿದ್ದಾರೆ. ಅಂತಹ ಯೋಗವನ್ನು ಉತ್ತೇಜಿಸಲು ಸರ್ಕಾರ ಪಠ್ಯದಲ್ಲಿಯೂ ಅಳವಡಿಸಿದೆ. ಅಂತಹ ಯೋಗ ಶಿಕ್ಷಕರನ್ನು ಇಂತಹ ಸಂಸ್ಥೆಗಳು ಹುಟ್ಟಿ ಹಾಕುತ್ತಿರುವುದು ಸ್ವಾಗತಾರ್ಹ ಎಂದರು.
ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಯೋಗಪ್ರಕಾಶ್, ಗೌರವ ಕಾರ್ಯದರ್ಶಿ ರಮೇಶ್, ಮೈಸೂರು ಯೋಗ ಒಕ್ಕೂಟದ ಉಪಾಧ್ಯಕ್ಷ ಎಂ.ಎಸ್.ರಮೇಶ್, ಪರಮಹಂಸ ಯೋಗ ಸಂಸ್ಥೆ ನಿರ್ದೇಶಕಿ ಪವನ, ಪರಮಹಂಸ ಯೋಗ ವಿದ್ಯಾಲಯ ಸಂಸ್ಥಾಪಕ ಶಿವಪ್ರಕಾಶ್, ಆಶಾ ಯೋಗೇಶ್ ಉಪಸ್ಥಿತರಿದ್ದರು.
ಯೋಗ ಜೀವನಕ್ಕೆ ಅತಿಮುಖ್ಯ: ಎಸ್.ಟಿ.ರವಿಕುಮಾರ್
