ಇಂದು ಎಲ್ಲಾ ಅಣ್ಣ- ತಂಗಿಯರಲ್ಲಿ ಸಂತಸದ ದಿನ. ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಹೋದರ, ಸಹೋದರಿ ಕುರಿತ ಚಿತ್ರಗಳ ಕಣ್ತುಂಬಿಕೊಂಡಿದ್ದವು. ಅವುಗಳಲ್ಲಿ ನೀವೂ ಸಂಭ್ರಮಿಸಿದ್ದಿರಿ. ರಾಖಿ ಹಬ್ಬ. ಒಡಹುಟ್ಟಿದವರ ನಡುವಿನ ಮುರಿಯಲಾಗದ ಮತ್ತು ವಿಶೇಷ ಬಂಧಗಳನ್ನು ಆಚರಿಸುವ ಹಬ್ಬ. ಶ್ರಾವಣ ಮಾಸದ ಹುಣ್ಣಿಮೆಯ ಆಸುಪಾಸಿನಲ್ಲಿ ಬರುತ್ತದೆ. ಈ ಹಬ್ಬಕ್ಕೆ ಸಂಬಂಧಿಸಿದಂತೆ ಮಹಾಭಾರತದಲ್ಲಿ ಒಂದು ಕಥೆ ಇದೆ. ಶ್ರೀಕೃಷ್ಣನು ಆಕಸ್ಮಿಕವಾಗಿ ಸುದರ್ಶನ ಚಕ್ರದಿಂದ ತನ್ನ ಬೆರಳನ್ನು ಕತ್ತರಿಸಿಕೊಳ್ಳುತ್ತಾನೆ. ಇದನ್ನು ನೋಡಿದ ದೌಪದಿ ತನ್ನ ಸೀರೆಯಿಂದ ಬಟ್ಟೆಯ ತುಂಡನ್ನು ಹರಿದು ರಕ್ತಸ್ರಾವವನ್ನು ನಿಲ್ಲಿಸಲು ಗಾಯಕ್ಕೆ ಕಟ್ಟಿದಳು. ಈ ಕಾರಣಕ್ಕಾಗಿ ಶ್ರೀಕೃಷ್ಣ, ದ್ರೌಪದಿಯನ್ನು ಸಹೋದರಿಯಾಗಿ ಸ್ವೀಕರಿಸಿ, ಶಾಶ್ವತವಾಗಿ ರಕ್ಷಿಸುವ ಭರವಸೆ ನೀಡಿದನು.