ಮೈಸೂರು: ಸಂಸದ ಪ್ರತಾಪಸಿಂಹ ತಮ್ಮ ರಾಜಕೀಯಕ್ಕಾಗಿ ಚಾಮುಂಡಿ ಚಲೋ ಎಂದು ಕರೆ ನೀಡುತ್ತಿದ್ದಾರೆ. ನಾವು ಚಾಮುಂಡಿ ವಿರೋಧಿಗಳಲ್ಲ ಎಂದು ಮಾಜಿ ಮಹಾಪೌರ ಪುರುಷೋತ್ತಮ್ ಹೇಳಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಪ್ರತಾಪಸಿಂಹ ಅವರಂತರಹ ಸಂಸದರನ್ನು ನಾನು ಕಂಡಿಲ್ಲ. ವೈಯುಕ್ತಿಕ ದ್ವೇಷಕ್ಕಿಳಿಯುವುದು ನಮ್ಮ ಮನಸ್ಥಿತಿಯಲ್ಲ.ಹೀಗಾಗಿ ನಾವು ಯಾವ ಸಂಘರ್ಷಕ್ಕೂ ಇಳಿಯದೇ ಕಾರ್ಯಕ್ರಮ ಮಾಡುತ್ತೇವೆ. ನಾವು ಬೇರೊಬ್ಬರ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮಾಡುವುದಿಲ್ಲ ಎಂದು ತಿಳಿಸಿದರು.
ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಮಹಿಷ ರಕ್ಷಾಸ ಆಗಿದ್ದರೆ ಮೈಸೂರಿಗೆ ಏಕೆ ಆತನ ಹೆಸರಿಡುತ್ತಿದ್ದರು. ಇಂತಹ ಸಾಮಾನ್ಯ ಜ್ಞಾನ ನಿಮಗಿಲ್ಲವೇ? ನಮಗೆ ಸಂವಿಧಾನವೇ ಸರ್ವಶ್ರೇಷ್ಠ ಗ್ರಂಥ ಅದನ್ನು ಬಿಟ್ಟು ಬೇರೆಯದನ್ನು ಒಪ್ಪುವುದಿಲ್ಲ ಎಂದರು.
ರಾಜಕೀಯಕ್ಕಾಗಿ ಎಂಪಿಯಿಂದ ಚಾಮುಂಡಿ ಚಲೋ
