ರಾಜ್ಯ ಸರ್ಕಾರವು ಕರ್ನಾಟಕ ಸಿನಿ ಮತ್ತು ಸಾಂಸ್ಕöÈತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024 ಅನ್ನು ಮಂಡಿಸಿದೆ. ಆದರೆ ಈ ಮಸೂದೆ ಬಗ್ಗೆ ಬಿಜೆಪಿಯು ಆಕ್ಷೇಪಣೆ ಎತ್ತಿದ್ದು, ಟಿಕೆಟ್ ಹಾಗೂ ಒಟಿಟಿ ದರಗಳನ್ನು ಹೆಚ್ಚಿಸಿ, ಮನೊರಂಜನೆಯನ್ನು ಪ್ರೇಕ್ಷಕರ ಪಾಲಿಗೆ ದುಬಾರಿ ಮಾಡುವ ಕಾರಣದಿಂದ ಈ ಮಸೂದೆಯನ್ನು ರಾಜ್ಯ ಸರ್ಕಾರ ಮಂಡಿಸಿದೆ ಎಂದು ಆರೋಪಿಸಿದೆ.
ಸಿನಿ ಮತ್ತು ಸಾಂಸ್ಕöÈತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಉಪತೆರಿಗೆ ಅಥವಾ ಉಪಕರವನ್ನು ಸಿನಿಮಾ ಟಿಕೆಟ್, ವಂತಿಗೆಗಳ ಮೇಲೆ ಹೇರತಕ್ಕದ್ದು ಎಂದು ರಾಜ್ಯ ಸರ್ಕಾರವು ಮಸೂದೆಯಲ್ಲಿ ಉಲ್ಲೇಖಿಸಿದೆ. ಈ ತೆರಿಗೆಯು ಶೇ 2 ರಷ್ಟನ್ನು ದಾಟುವಂತಿಲ್ಲ ಆದರೆ ಶೇಕಡಾ ಒಂದಕ್ಕಿAತಾ ಕಡಿಮೆಯೂ ಇರುವಂತಿರುವAತಿಲ್ಲ ಎಂದು ಹೇಳಿದೆ. ಈ ಮಸೂದೆಯು ಅನುಮೋದನೆಯಾದರೆ ಸಿನಿಮಾ ಟಿಕೆಟ್ ಬೆಲೆ ಹಾಗೂ ಒಟಿಟಿ ಸಬ್ಸ್ಕಿçಪ್ಷನ್ ಬೆಲೆಗಳು ಸಹ ಏರಿಕೆ ಆಗಲಿವೆ. ಈ ಶುಲ್ಕವನ್ನು ಸಿನಿ ಮತ್ತು ಸಾಂಸ್ಕöÈತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಬಳಸಿಕೊಳ್ಳಲಾಗುತ್ತದೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.
ಕರ್ನಾಟಕ ಸಿನಿ ಮತ್ತು ಸಾಂಸ್ಕöÈತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಮಸೂದೆ 2024 ಅನ್ನು ಟೀಕಿಸಿ ಟ್ವೀಟ್ ಒಂದನ್ನು ಮಾಡಿರುವ ಕರ್ನಾಟಕ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ಸಿ.ಎಂ ಸೀಟನ್ನು ಉಳಿಸಿಕೊಳ್ಳಲು ನಾಡಿನ ಸಿನಿ ಪ್ರಿಯರ ಬೆನ್ನಿಗೂ ತೆರಿಗೆ ಬರೆ ಎಳೆಯಲು ಮುಂದಾಗಿದ್ದಾರೆ.