ಮೈಸೂರು: ರಾತ್ರೋರಾತ್ರಿ ರಾಜೇಂದ್ರ ಶ್ರೀಗಳ ಪ್ರತಿಮೆಯನ್ನಿಟ್ಟು ಶ್ರೀಗಳಿಗೆ ಅಪಮಾನಿಸಿದ್ದು, ಇದೆಲ್ಲದರ ವಿರುದ್ಧ ನಮ್ಮ ಕಾನೂನು ಹೋರಾಟ ಮುಂದುವರೆಸುತ್ತೇವೆಂದು ಅರಸು ಮಂಡಳಿ ಹೇಳಿದೆ.
ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮರನಾಥ ರಾಜೇ ಅರಸ್ ಮಾತನಾಡಿ, ಮೈಸೂರು ಅರಮನೆ ಗನ್ ಹೌಸ್ ಬಳಿ ರಾತ್ರಿ ಪ್ರತಿಮೆ ಇಟ್ಟಿದ್ದಾರೆ. ಶಿವರಾತ್ರಿ ಸ್ವಾಮಿಜಿ ಅವರ ಪುತ್ತಳಿ ಯನ್ನ ರಾತ್ರಿಯ ವೇಳೆ ಕದ್ದು ಇಟ್ಟಿರುವುದು ಅವರಿಗೆ ಅವಮಾನ ಮಾಡಿದ್ದಾರೆ. ಜೆಎಸ್ಎಸ್ ಸಂಸ್ಥೆಗೆ ಅವಮಾನ ಮಾಡಿದ್ದಾರೆ. ಪ್ರತಿ ನಿರ್ಮಾಣಕ್ಕೆ ಯಾವುದೇ ಸ್ಪಷ್ಟ ದಾಖಲಾತಿ ಇಲ್ಲ. ಮೈಸೂರಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ಶ್ರೀಕಂಠ ದತ್ತ ಒಡೆಯರ ಪ್ರತಿಮೆ ನಿರ್ಮಾಣ ಮಾಡಬೇಕು. ರಾಜ ಮನೆ ತನದವರ ಪುತ್ಥಳಿ ಇಡೋದಕ್ಕೆ ಆಗುವುದಿಲ್ಲ ಎಂದರೆ, ಶ್ರೀ ಚಾಮುಂಡೇಶ್ವರಿ ಇಡಬೇಕು. ಯಾವುದೋ ಒಂದು ಸಮಿತಿ ಸೇರಿಕೊಂಡು ಪುತ್ಥಳಿ ಇಡೋದಕ್ಕೆ ಬಿಡೋದಿಲ್ಲ. ಇದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ಆದೇಶ ಪಾಲನೆ ಮಾಡಿಲ್ಲ. ನಾವು ನ್ಯಾಯುತವಾಗಿ ಹೋರಾಟ ಮಾಡುತ್ತೇವೆಂದರು.
ಇನ್ನೂ ಮಠ ಬೆಳೆದಿರುವುದು ಅರಮನೆಯಿಂದ ಹೊರತು ಮಠ ದಿಂದ ಅರಮನೆ ಬೆಳೆದಿಲ್ಲ. ಮಠದವರು ಬಂದು ದೈರ್ಯದಿಂದ ಹೇಳಬೇಕಿತ್ತು ಕದ್ದು ಹಾಕೋದು ಏನಿತ್ತು. ಅರಮನೆಗೆ ಮೋಸ ಆಗುತ್ತಿದೆ. ಕೋರ್ಟ್ ಆದೇಶ ಬಂದರೆ ಯಾವುದೇ ಪುತ್ಥಳಿ ನಿರ್ಮಾಣಕ್ಕೆ ನಾವು ಒಪ್ಪಿಕೊಳ್ಳುತ್ತೇವೆ. ಅದು ಹೊರತಾಗಿ ನಮ್ಮ ಹೋರಾಟ ಮುಂದುವರೆಸುತ್ತೇವೆಂದರು. ಶ್ರೀಧರ್ ರಾಜ್ ಅರಸು ಮತ್ತು ಜೈದೇವ್ ಅರಸು, ಶ್ರೀಕಾಂತ್ ರಾಜ್ ಅರಸು ಗೋಷ್ಠಿಯಲ್ಲಿದ್ದರು.